2014: ಬಿಸಿಲನಾಡಲ್ಲಿ ಕಾತರ

7

2014: ಬಿಸಿಲನಾಡಲ್ಲಿ ಕಾತರ

Published:
Updated:

ರಾಯಚೂರು: ಹೊಸ ನೀರು ಬಂದಾಗ ಹಳೆ ನೀರು ಹೊಗಲೇ ಬೇಕು ಎಂಬಂತೆ ಹೊಸ ವರ್ಷಕ್ಕೆ ಕಾಲಿಡುವ ಮೂಲಕ ಹಳೆ ವರ್ಷಕ್ಕೆ ಗುಡ್‌ ಬೈ ಹೇಳಿಯಾಗಿದೆ.ಹಳೆಯ ವರ್ಷದ  ಘಟನೆಗಳು ನೆನಪುಗಳಿಗೆ ಮಾತ್ರ ಸಿಮೀತ ಗೊಂಡಿವೆ. ಹೊಸ ವರ್ಷ ಹೊಸ ಕನಸುಗಳಿಗೆ ಲಗ್ಗೆ ಇಡುತ್ತ ಸಂಭ್ರಮಿಸುವ ಕಾಲ.ಪರಸ್ಪರ ಒಬ್ಬರಿಗೊಬ್ಬರು ಶುಭಾಶಯ ಕೋರುತ್ತಾ ಕೇಕ್‌ ಕತ್ತರಿಸುವ ಸಿಹಿ ತಿನಿಸು ತಿನ್ನುವ ಕ್ಷಣಗಳಿಗೆ ಬಿಸಿಲ ನಗರಿ ರಾಯಚೂರು ಮಂಗಳವಾರ ಮಧ್ಯರಾತ್ರಿ ಸಾಕ್ಷಿಯಾಯಿತು.2014ರ ವರ್ಷದ ಮೊದಲ ದಿನ ಮತ್ತು ಎಳ್ಳೆ ಅಮವಾಸ್ಯೆ ಕೂಡಿ ಬಂದಿದೆ. ಇದರ ಸಿದ್ಧತೆಯೂ ಎಲ್ಲಡೆ ಜೋರಾಗಿದೆ. ಈ ಹಬ್ಬ ಹೊಸ ವರ್ಷದ ಸಂಭ್ರಮಕ್ಕೆ ಮತ್ತಷ್ಟು ಹುರುಪು ತುಂಬಿದೆ. ಗ್ರಾಮೀಣರು ಶೇಂಗಾ, ಎಳ್ಳು ಹೋಳಿಗೆ ಸವಿಯಲು ಕಾತರರಾಗಿದ್ದಾರೆ. ನಗರದ ವಿದ್ಯಾರ್ಥಿಗಳು, ಯುವಕರ ಗುಂಪು ಕೇಕ್‌್ ಕತ್ತರಿಸಿ ಹೊಸವರ್ಷವನ್ನು ಸ್ವಾಗತಿಸಿದರು.ಹೊಸ ಕನಸು ಕಟ್ಟಿಕೊಂಡು ಹೊಸ ವರ್ಷಕ್ಕೆ ಪದಾರ್ಪಣೆ ಮಾಡುುವ ಎಲ್ಲರಿಗೂ ಹೊಸ ವರ್ಷ ಹರುಷ ತರಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry