2014 ರಫ್ತಿಗೆ ಆಶಾದಾಯಕ ವರ್ಷ

7

2014 ರಫ್ತಿಗೆ ಆಶಾದಾಯಕ ವರ್ಷ

Published:
Updated:

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ದಿಂದಾಗಿ ಭಾರತೀಯ ರಫ್ತು ವ್ಯವಹಾರ ದಲ್ಲಿ ಹಲವು ಏರಿಳಿತಗಳನ್ನು ಕಂಡ 2013 ಇದೀಗ ನಿರ್ಗಮಿಸಿದ್ದು ಸಮೃದ್ಧ ಆರ್ಥಿಕ ಪ್ರಗತಿಗೆ  2014 ಸಾಕಾರಗೊಳ್ಳುವ ಆಶಯವನ್ನು ಉದ್ಯಮರಂಗದ ಹಲವರು ವ್ಯಕ್ತಪಡಿಸಿದ್ದಾರೆ.ಅಮೆರಿಕ, ಯುರೋಪ್‌ ಹಾಗೂ ಏಷ್ಯಾದ ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಚೇತರಿಕೆ ಕಂಡಿರುವುದರಿಂದ ಭಾರತದ ರಫ್ತಿಗೆ ಇದೀಗ ಶುಕ್ರದೆಸೆ ಆರಂಭವಾಗಿದೆ ಎಂದು ಔದ್ಯಮಿಕ ವಲಯದ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಕಳೆದ ಜುಲೈನಿಂದ ಎರಡಂಕಿಗಳಲ್ಲಿ ರಫ್ತು ವ್ಯವಹಾರ ಹೆಚ್ಚಾಗಿದೆ.  ಇದು ಕಳೆದ ಎರಡು ವರ್ಷಗಳ ಅಕ್ಟೋಬರ್‌ ತಿಂಗಳಿನಲ್ಲಿ ದಾಖಲಾದ ಗರಿಷ್ಠ ಪ್ರಮಾಣದ (ಶೇ 13.47) ರಫ್ತು ಎಂದು ದಾಖಲಾಗಿದೆ. ಆದಾಗ್ಯೂ ಪ್ರಗತಿಯ ದರ ನವೆಂಬರ್ ನಲ್ಲಿ ದಾಖಲಾಗಿದ್ದು ಕೇವಲ ಶೇ 5.9.ಭಾರತದ ರಫ್ತು ಕ್ಷೇತ್ರದ ಪ್ರಗತಿ ಬಹುತೇಕ ಅಮೆರಿಕ ಹಾಗೂ ಯುರೋಪ್‌ ಮಾರುಕಟ್ಟೆಗಳನ್ನೇ ಅವಲಂಬಿಸಿದೆ. ಹಾಗಾಗಿ ಈ ದೇಶಗಳ ಅರ್ಥವ್ಯವಸ್ಥೆಯಲ್ಲಿ ಆಗುವ ಪರಿಣಾಮಗಳು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರದೆ ಇರಲಾರದು. ಸಾಂಪ್ರದಾಯಿಕ ಮಾರುಕಟ್ಟೆಗಳಿಂದ ಹೊರತುಪಡಿಸಿ ಪರ್ಯಾಯ ಆರ್ಥಿಕತೆಗಳತ್ತ ಮುಖಮಾಡಿದರೂ ಇದು ನಿರೀಕ್ಷಿತ ಫಲ ನೀಡಲಿಲ್ಲ. ಹಾಗಾಗಿ ಭಾರತ ಮತ್ತೆ ಅಮೆರಿಕ ಹಾಗೂ ಯುರೋಪ್‌ ಮಾರುಕಟ್ಟೆಗಳನ್ನೇ ನಂಬಿ ಕೂರು ವಂತಾಯಿತು.ಆರ್ಥಿಕ ಸಂಕಷ್ಟದ ಸನ್ನಿವೇಶದಲ್ಲೂ ಭಾರತದ ರಫ್ತು ವ್ಯವಹಾರ ಗಮನಾರ್ಹವಾಗಿ ನಡೆದಿದ್ದು 2011–12 ಹಾಗೂ 2012–13 ರ ಅವಧಿಯಲ್ಲಿ ಈ ಮೊತ್ತ 30 ಕೋಟಿ (₨1860 ಕೋಟಿ) ಅಮೆರಿಕನ್‌ ಡಾಲರ್‌ ಮೀರಿದೆ.2012–13ರ ಅವಧಿಯಲ್ಲಿ ಚಿನ್ನ ಹಾಗೂ ಪೆಟ್ರೊಲಿಯಂ ಉತ್ಪನ್ನಗಳ ಆಮದು ಪ್ರಮಾಣದಲ್ಲಿ ಭಾರಿ ಏರಿಕೆಯಾದ ಪರಿಣಾಮ ಚಾಲ್ತಿ ಖಾತೆ ಕೊರತೆ (ಸಿಎಡಿ) ಮೇಲೆ ನೇರ ಪರಿಣಾಮ ಬೀರುವಂತಾಯಿತು.ಸಿಎಡಿ ಮೇಲೆ ಉಂಟಾದ ಒತ್ತಡದ ಪರಿಣಾಮ ಏಪ್ರಿಲ್‌ 30ರಿಂದ ದಾಖಲೆಯ ಪ್ರಮಾಣದಲ್ಲಿ ರೂಪಾಯಿ ಅಪಮೌಲ್ಯಗೊಳ್ಳಲು ಕಾರಣವಾಯಿತು.

ರಫ್ತು ಉತ್ತೇಜನಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಹಾಗೂ ಅಮೆರಿಕ ಹಾಗೂ ಯುರೋಪ್‌ಗಳಲ್ಲಿ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಪರಿಣಾಮ ಪ್ರಸಕ್ತ ಹಣಕಾಸು ವರ್ಷದಲ್ಲಿ ರಫ್ತು ವ್ಯವಹಾರದ ಮೊತ್ತ 32.50 ಕೋಟಿ ಅಮೆರಿಕನ್‌ ಡಾಲರ್‌ಗೆ (₨2015 ಕೋಟಿಗೆ) ಹೆಚ್ಚುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.ಕೇಂದ್ರ ವಾಣಿಜ್ಯ ಸಚಿವಾಲಯದ ಅಧಿಕಾರಿ ಯೊಬ್ಬರು ಹೇಳುವಂತೆ, ‘ಜಾಗತಿಕ ಮಟ್ಟದಲ್ಲಿ ಉಂಟಾಗುವ ಸಮಸ್ಯೆಯ ಪರಿಣಾಮವನ್ನು ಭಾರತ ಎದುರಿಸಬೇಕಾಗುತ್ತದೆ’

ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ನಿರೀಕ್ಷಿದಂತೆ, 2014ರಲ್ಲಿ ಜಾಗತಿಕ ವ್ಯಾಪಾರ ಪ್ರಗತಿಯ ಪ್ರಮಾಣ ಶೇ 5ರಷ್ಟು ಇರುವ ಬದಲು ಶೇ 4.5ಗೆ ಕುಸಿಯಲಿದೆ.

2013ರಲ್ಲಿ ಈ ಪ್ರಮಾಣ ಶೇ 4.5ರಿಂದ ಶೇ 3.3ಗೆ ಕುಸಿಯಲಿದೆ ಎನ್ನುತ್ತಿದೆ ಸಂಘಟನೆ.ರಫ್ತುದಾರರಿಗೆ 2013 ಉತ್ತಮ ವರ್ಷವಾಗಿರ ಲಿಲ್ಲ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ತಿಳಿಸಿದೆ.

‘2013ರ ಮೊದಲ ಅರ್ಧ ಅವಧಿ ನಿಜಕ್ಕೂ ರಫ್ತು ವ್ಯವಹಾರಕ್ಕೆ ಪ್ರತಿಕೂಲವಾಗಿದ್ದರೂ ನಂತರ (ಜುಲೈ ತಿಂಗಳಿನಿಂದ) ನಿಧಾನಕ್ಕೆ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿತು. ಅಮೆರಿಕ ಹಾಗೂ ಯುರೋಪ್‌ ಮಾರುಕಟ್ಟೆಗಳಲ್ಲಿ ಸ್ಥಿರತೆ ಕಂಡು ಬರುತ್ತಿರು ವುದರಿಂದ 2014ರಲ್ಲಿ ಇಂತಹ ಸ್ಥಿತಿ ಉಂಟಾಗದು ಎನ್ನುವ ಭರವಸೆಯನ್ನು ಒಕ್ಕೂಟದ ಅಧ್ಯಕ್ಷ ರಫೀಕ್‌ ಅಹ್ಮದ್‌ ವ್ಯಕ್ತಪಡಿಸುತ್ತಾರೆ.2012–13ರ ಅವಧಿಯಲ್ಲಿ ರಫ್ತು ಕ್ಷೇತ್ರದ ಉತ್ತೇಜನಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ರಫ್ತುದಾರರಿಗೆ ಹಲವು ರಿಯಾಯ್ತಿ ನೀಡಲಾಗಿದೆ. ರಫ್ತಿನಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿರುವ ವಿಶೇಷ ಆರ್ಥಿಕ ವಲಯಗಳ (ಎಸ್‌ಇಜೆಡ್‌) ಪುನಶ್ಚೇತನಕ್ಕೆ ಸರ್ಕಾರ ಹಲವು ಪ್ಯಾಕೇಜ್‌ಗಳನ್ನು ಘೋಷಿಸಿದೆ.‘ಭಾರತೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಬಲವಾದ ಸ್ಪರ್ಧೆ ನೀಡು ವಂತಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಈಗ ತುರ್ತಾಗಿ ಆಗಬೇಕಾದ ಕೆಲಸ’ ಎಂದು ವಿದೇಶ ವ್ಯಾಪಾರದ ಭಾರತೀಯ ಸಂಸ್ಥೆ (ಐಐಎಫ್‌ಟಿ) ಅಧ್ಯಾಪಕ ರಾಕೇಶ್‌ ಮೋಹನ್‌ ಜೋಶಿ ಹೇಳುತ್ತಾರೆ.‘2013ರ ಆರಂಭ ರಫ್ತು ವಲಯಕ್ಕೆ ಕೆಟ್ಟ ಅವಧಿಯಾಗಿತ್ತು. ಆದರೆ ನಮ್ಮ ರಫ್ತು ವ್ಯವಹಾರ ದಲ್ಲಿ ನಿಧಾನಕ್ಕೆ ಚೇತರಿಕೆ ಕಂಡುಬಂದಿತು. ಇದೇ ಬೆಳವಣಿಗೆ 2014ರಲ್ಲೂ ಮುಂದುವರೆಯುವ ಸಾಧ್ಯತೆ ಇದೆ’ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಎಂಜಿನಿಯರಿಂಗ್‌, ಜವಳಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಚೇತರಿಕೆ ಕಾಣುವ ಆಶಯ ತಜ್ಞರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry