2015ಕ್ಕೆ ಹೃದ್ರೋಗಿಗಳ ಸಂಖ್ಯೆ 3 ಕೋಟಿಗೆ

ಗುರುವಾರ , ಜೂಲೈ 18, 2019
28 °C

2015ಕ್ಕೆ ಹೃದ್ರೋಗಿಗಳ ಸಂಖ್ಯೆ 3 ಕೋಟಿಗೆ

Published:
Updated:

ಬೆಂಗಳೂರು: `ಭಾರತದಲ್ಲಿ ಹೃದ್ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, 2015ರ ವೇಳೆಗೆ ಸುಮಾರು 3 ಕೋಟಿ ಮಂದಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ನಿರೀಕ್ಷೆ ಇದೆ~ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಸಿ. ಎನ್.ಮಂಜುನಾಥ್ ನುಡಿದರು.

ಎಸ್.ಎಸ್.ಗ್ರೂಪ್ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ಚಿತ್ರಪಟ (ಹೆಲ್ತ್ ಚಾರ್ಟ್) ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, `ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೃದ್ರೋಗಕ್ಕೆ ತುತ್ತಾಗುವವರ ಸಂಖ್ಯೆ ಅಧಿಕ. ಭಾರತ ವಿಶ್ವದಲ್ಲೇ ಹೃದ್ರೋಗಿಗಳನ್ನು ಹೊಂದಿರುವ ಎರಡನೇ ರಾಷ್ಟ್ರವಾಗಿದೆ~ ಎಂದು ವಿಷಾದಿಸಿದರು.

`ಈ ಕಾಯಿಲೆಗೆ ಮಾನಸಿಕ ಒತ್ತಡ ಕಾರಣವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಇದು ಸಾಮಾನ್ಯವಾಗಿದೆ. ಜನರು ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು~ ಎಂದರು. `ಇಂದಿನ ಎಲ್ಲಾ ಕಾಯಿಲೆಗಳಿಗೆ ಬದಲಾಗುತ್ತಿರುವ ಜೀವನ ಶೈಲಿ ಮತ್ತು ಆಹಾರ ಪದ್ಧತಿಯೇ ಕಾರಣ. ಆಹಾರ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ರಾಸಾಯನಿಕಗಳನ್ನು ಬಳಕೆ ಮಾಡುವುದರಿಂದ  ಕಾಯಿಲೆಗಳು ಉತ್ಪತ್ತಿಯಾಗುತ್ತಿವೆ~ ಎಂದು ಅವರು ವಿವರಿಸಿದರು.

`ಹಿಂದೆ ಗ್ರಾಮಾಂತರ ಪ್ರದೇಶದ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವಿರಳವಾಗಿದ್ದವು. ಆದರೆ ಅಂಕಿ ಅಂಶಗಳ ಪ್ರಕಾರ (2008) ಶೇಕಡಾ 7ರಷ್ಟು ಗ್ರಾಮಾಂತರ ಪ್ರದೇಶದ ಜನರೂ ಈ ಮರಣ ಹೊಂದುತ್ತಿದ್ದಾರೆ ಎಂದು ತಿಳಿದು ಬಂದಿದೆ~ ಎಂದರು. `ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ನಾಗರಿಕರು ಮುಖ್ಯವಾಗಿ ಒತ್ತಡ ರಹಿತವಾಗಿ ಕೆಲಸ ಮಾಡಬೇಕು. ಅಲ್ಲದೆ ಸಹ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು. ಎಸ್.ಎಸ್.ಗ್ರೂಪ್‌ನ ಟ್ರಸ್ಟಿ ರವೀಂದ್ರ ಪ್ರಸಾದ್, ಮಲ್ಯ ಆಸ್ಪತ್ರೆಯ ಮುಖ್ಯ ಆಹಾರತಜ್ಞೆ ಡಾ.ತಾರಾ ಮುರುಳಿ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry