2016ರ ವೇಳೆಗೆ ಎಲ್ಲರಿಗೂ ಬ್ಯಾಂಕ್‌ ಖಾತೆ

7

2016ರ ವೇಳೆಗೆ ಎಲ್ಲರಿಗೂ ಬ್ಯಾಂಕ್‌ ಖಾತೆ

Published:
Updated:

ಮುಂಬೈ (ಪಿಟಿಐ): ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರುವ ಮೂಲಕ, 2016ರ ಹೊತ್ತಿಗೆ ಪ್ರತಿ ಪ್ರಜೆಯೂ ಬ್ಯಾಂಕ್ ಖಾತೆ ಹೊಂದುವಂತಾಗಲು ದೇಶದಾದ್ಯಂತ ವಿಶೇಷ ಬ್ಯಾಂಕ್‌ಗಳನ್ನು ಸ್ಥಾಪಿಸಬೇಕು’ ಎಂದು ಐಸಿಐಸಿಐ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ನಚಿಕೇತ್‌ ಮೊರ್‌ ನೇತೃತ್ವದ ಸಮಿತಿ ‘ಭಾರತೀಯ ರಿಸರ್ವ್ ಬ್ಯಾಂಕ್’ಗೆ ಸಲಹೆ ಮಾಡಿದೆ.

ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೂ ಈ ಬ್ಯಾಂಕ್‌ ಸೇವೆಗಳು ಲಭ್ಯವಾಗಬೇಕು. ಅಲ್ಲದೆ, ಬ್ಯಾಂಕಿಂಗ್‌ ಸೇವೆಗಳು(ಹಣ ಪಡೆಯುವುದು, ಖಾತೆಗೆ ಜಮಾ, ಠೇವಣಿ ಇಡುವುದು) ದೇಶದ ಎಲ್ಲೆಡೆಯ ಗ್ರಾಹಕರಿಗೂ ಹತ್ತಿರದಲ್ಲಿ, ಅಂದರೆ 15 ನಿಮಿಷಗಳ ನಡಿಗೆಯಷ್ಟು ದೂರದಲ್ಲಿಯೇ ದೊರೆಯುವಂತಿರಬೇಕು. ಅಷ್ಟರಮಟ್ಟಿಗೆ ಬ್ಯಾಂಕ್‌ ಶಾಖೆ, ಎಟಿಎಂ ಅಥವಾ ಕಿಯೋಸ್ಕ್‌ಗಳ ಸ್ಥಾಪನೆಯಾಗಬೇಕು ಎಂದು ಸಮಿತಿ ಸೂಚಿಸಿದೆ. ವಿತ್ತೀಯ ಸೇರ್ಪಡೆ ಕಾರ್ಯಕ್ರಮದ ಉತ್ತೇಜನಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡುವುದಕ್ಕಾಗಿ ‘ಆರ್‌ಬಿಐ’, ನಚಿಕೇತ್‌ ಮೊರ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry