ರಾಜೇಶ್- ನೂಪುರ್ ದಂಪತಿ ನಾಳೆ ಬಿಡುಗಡೆ ಸಾಧ್ಯತೆ

7

ರಾಜೇಶ್- ನೂಪುರ್ ದಂಪತಿ ನಾಳೆ ಬಿಡುಗಡೆ ಸಾಧ್ಯತೆ

Published:
Updated:
ರಾಜೇಶ್- ನೂಪುರ್ ದಂಪತಿ ನಾಳೆ ಬಿಡುಗಡೆ ಸಾಧ್ಯತೆ

ಗಾಜಿಯಾಬಾದ್‌: ಆರುಷಿ– ಹೇಮರಾಜ್‌ ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ರಾಜೇಶ್ ಮತ್ತು ನೂಪುರ್‌ ತಲ್ವಾರ್‌ ದಂಪತಿ ಶುಕ್ರವಾರ ದಸ್ನಾ ಕಾರಾಗೃಹದಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಅವರ ವಕೀಲರು ಹೇಳಿದ್ದಾರೆ.

‘ನ್ಯಾಯಾಲಯ ತಮ್ಮನ್ನು ದೋಷಮುಕ್ತಗೊಳಿಸಿದ ಸುದ್ದಿ ತಿಳಿದ ರಾಜೇಶ್ ಮತ್ತು ನೂಪುರ್‌ ತಲ್ವಾರ್‌ ದಂಪತಿ ತಮಗೆ ನ್ಯಾಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ’ ಎಂದು ದಸ್ನಾ ಕಾರಾಗೃಹದ ಜೈಲರ್‌ ಡಿ.ಆರ್‌. ಮೌರ್ಯ ತಿಳಿಸಿದ್ದಾರೆ.

‘ರಾಜೇಶ್‌ ಮತ್ತು ನೂಪುರ್‌ ಈ ಕೊಲೆ ಮಾಡಿಲ್ಲ ಎಂಬುದು ನಮಗೆ ಗೊತ್ತಿತ್ತು. ನ್ಯಾಯಾಲಯದ ತೀರ್ಪಿನಿಂದ ನಮಗೆ ಸಂತೋಷವಾಗಿದೆ. ಈ ತೀರ್ಪು ನೀಡಿದ ನ್ಯಾಯಾಲಯಕ್ಕೆ ಧನ್ಯವಾದಗಳು’ ಎಂದು ಆರುಷಿ ಅಜ್ಜ ಹೇಳಿದ್ದಾರೆ.

‘ತೀರ್ಪಿನ ಪ್ರತಿ ಓದಿ ಮುಂದಿನ ನಿರ್ಧಾರ’
ಅಲಹಾಬಾದ್‌ ಹೈಕೋರ್ಟ್‌ನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸಿಬಿಐ ಅಧಿಕಾರಿಗಳು, ‘ನಾವು ತೀರ್ಪಿನ ಪ್ರತಿಗಾಗಿ ಕಾಯುತ್ತಿದ್ದೇವೆ. ತೀರ್ಪನ್ನು ಪೂರ್ತಿಯಾಗಿ ಓದಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.

‘ಯಾವ ಆಧಾರದ ಮೇಲೆ ಅಲಹಾಬಾದ್‌ ಹೈಕೋರ್ಟ್‌ ಈ ತೀರ್ಪು ನೀಡಿದೆ ಎಂಬುದು ಗೊತ್ತಾಗುತ್ತಿಲ್ಲ. ತೀರ್ಪನ್ನು ಪೂರ್ತಿಯಾಗಿ ಓದಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ. ಈ ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ತಲ್ವಾರ್‌ ದಂಪತಿಯ ವಿರುದ್ಧ ಇದ್ದವು’ ಎಂದು ಸಿಬಿಐನ ನಿವೃತ್ತ ಪ್ರಾಸಿಕ್ಯೂಟರ್‌ ಆರ್‌.ಕೆ. ಶೈನಿ ತಿಳಿಸಿದ್ದಾರೆ.

ಇದನ್ನೂ ಓದಿ...
ಆರುಷಿ ಕೊಲೆ ಪ್ರಕರಣ: ರಾಜೇಶ್- ನೂಪುರ್ ದಂಪತಿ ಖುಲಾಸೆ

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry