ಡಾವಿಂಚಿಯ ಏಸು ಕಲಾಕೃತಿ ₹658 ಕೋಟಿಗೆ ಹರಾಜಾಗುವ ನಿರೀಕ್ಷೆ !

7
ಆಕಾಶ ನೀಲಿ ಬಣ್ಣದ ನಿಲುವಂಗಿ ತೊಟ್ಟಿರುವ ಏಸು ಕ್ರಿಸ್ತ

ಡಾವಿಂಚಿಯ ಏಸು ಕಲಾಕೃತಿ ₹658 ಕೋಟಿಗೆ ಹರಾಜಾಗುವ ನಿರೀಕ್ಷೆ !

Published:
Updated:
ಡಾವಿಂಚಿಯ ಏಸು ಕಲಾಕೃತಿ ₹658 ಕೋಟಿಗೆ ಹರಾಜಾಗುವ ನಿರೀಕ್ಷೆ !

ನ್ಯೂಯಾರ್ಕ್‌: ಪ್ರಸಿದ್ಧ ಚಿತ್ರಕಲಾವಿದ ಲಿಯನಾರ್ಡೊ ಡಾವಿಂಚಿ ಅವರು ರಚಿಸಿರುವ ‘ಸಾಲ್ವೇಟರ್‌ ಮುಂಡಿ’ (ಜಗದ ರಕ್ಷಕ) ಏಸು ಕ್ರಿಸ್ತನ ಕಲಾಕೃತಿಯು ಸುಮಾರು ₹658 ಕೋಟಿಗೆ ಹರಾಜಾಗುವ ನಿರೀಕ್ಷೆಯಿದೆ.

ಆಕಾಶ ನೀಲಿ ಬಣ್ಣದ ನಿಲುವಂಗಿ ತೊಟ್ಟಿರುವ ಏಸು ಕ್ರಿಸ್ತ ಎಡದ ಕೈಯಲ್ಲಿ ಸ್ಫಟಿಕದ ಗೋಲವನ್ನು ಹಿಡಿದಿರುವ ಹಾಗೂ ಬಲಗೈಯಲ್ಲಿ ಆಶೀರ್ವಾದ ಮುದ್ರೆ ತೋರಿರುವ ಈ ಕಲಾಕೃತಿಯು ಡಾವಿಂಚಿಯ ಜಗತ್ಪ್ರಸಿದ್ಧ ಕಲಾಕೃತಿಗಳಲ್ಲೊಂದಾಗಿದೆ.

1958ರಲ್ಲಿ ಈ ಕಲಾಕೃತಿಯು 45 ಪೌಂಡ್‌ಗೆ ಹರಾಜಾಗಿತ್ತು.

ನವೆಂಬರ್ 15ರಂದು ನ್ಯೂಯಾರ್ಕ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಇದರ ಮಾಲೀಕತ್ವ ಹೊಂದಿರುವ ಕ್ರಿಸ್ಟೀಸ್‌ ಸಂಸ್ಥೆ ಹೇಳಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry