7

ಉಪಯೋಗಿ ಗಿಡ ಬೆಳೆಸಿ

Published:
Updated:

‘ಮರ ಬೆಳೆಸಿ, ಪರಿಸರ ಉಳಿಸಿ’ ಎಂಬ ಅರಣ್ಯ ಇಲಾಖೆಯ ಘೋಷಣೆಗೆ ಪೂರಕವಾಗಿ ಸರ್ಕಾರೇತರ ಸೇವಾ ಸಂಸ್ಥೆಗಳೂ ಹಸಿರೀಕರಣ ಕಾರ್ಯದಲ್ಲಿ ಭಾಗಿಯಾಗಿರುವುದು ಸಂತಸ ವಿಷಯ.

ಮಾಮೂಲಾಗಿ ಹೊಂಗೆ, ಬೇವು, ಅರಳಿ ಮುಂತಾದ ಸಸ್ಯಗಳನ್ನೇ ನೆಡುವುದರ ಜೊತೆಗೆ ಕಾಡಿನ ಪ್ರಾಣಿ ಪಕ್ಷಿಗಳಿಗೂ ಆಹಾರವಾಗಬಲ್ಲ ನೇರಳೆ, ನಾಯಿ ನೇರಳೆ, ಅತ್ತಿ, ಬೇಲ, ನೆಲ್ಲಿ ಮುಂತಾದ ಹಣ್ಣಿನ ಮರಗಳನ್ನೂ ಬೆಳೆಸಬೇಕು.

ಮಲೆನಾಡಿಗೆ ಸೀಮಿತವಾಗಿರುವ ಅಳಲೆಕಾಯಿ, ಅಂಟುವಾಳ, ಪುನರ್ಪುಳಿ, ಸೀಮೆ ಹಲಸು ಮುಂತಾದ ಸಸ್ಯಗಳನ್ನು ಬಯಲು ಸೀಮೆಯ ಕಾಡುಗಳಲ್ಲಿಯೂ ಬೆಳೆಸಬೇಕು.

ಹೊನ್ನೆ, ಬೀಟೆ, ಹತ್ತಿ ಹಾಗೂ ವಿನಾಶದ ಅಂಚಿನಲ್ಲಿರುವ ಸುರಗಿ, ದೂಪದ ಮರ, ನಂಜಿನ ಕೊರಡು ಮುಂತಾದ ಸಸ್ಯಗಳನ್ನು ಕೊಟ್ಟರೆ ಸಾರ್ವಜನಿಕರು ಸ್ವಇಚ್ಛೆಯಿಂದ ಬೆಳೆಸುತ್ತಾರೆಂಬುದರಲ್ಲಿ ಸಂಶಯವಿಲ್ಲ.

ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಕ್ರಮಕೈಗೊಂಡು ಲಂಟಾನ, ಬಳ್ಳಾರಿ ಜಾಲಿಯಂಥ ಮುಳ್ಳಿನ ಗಿಡಗಳನ್ನು ತೊಲಗಿಸಬೇಕು.

-ಪ್ರಸಾದ್ ಎನ್., ಸಿಂಗಾನಲ್ಲೂರು, ಕೊಳ್ಳೇಗಾಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry