7

ಕುಮಾರಸ್ವಾಮಿ ಮುಂದಿನ ಸಿಎಂ‌ ಇಲ್ಲ ಕಿಂಗ್ ಮೇಕರ್

Published:
Updated:
ಕುಮಾರಸ್ವಾಮಿ ಮುಂದಿನ ಸಿಎಂ‌ ಇಲ್ಲ ಕಿಂಗ್ ಮೇಕರ್

ಹಾಸನ: ಕುಮಾರಸ್ವಾಮಿ ಮುಂದಿನ ಸಿಎಂ‌ ಇಲ್ಲ ಕಿಂಗ್ ಮೇಕರ್ ಎಂದು ಎಚ್.ಡಿ‌. ದೇವೇಗೌಡರ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೌಡರು ಒಬ್ಬೊಬ್ಬರ ಭಾವನೆ, ನಂಬಿಕೆ ಒಂದು ರೀತಿ ಇರುತ್ತದೆ. ನಾನು ದೇವರು ಮತ್ತು ಜ್ಯೋತಿಷ್ಯವನ್ನು ನಂಬುತ್ತೇನೆ. ದೇವರ ಆಶೀರ್ವಾದ ಪಡೆದೇ ನನ್ನ ರಾಜಕೀಯ ಜೀವನ‌ ಆರಂಭಿಸಿದೆ.

ದೇವರು, ಜನರ ಅನುಗ್ರಹ ಇದ್ದರೆ ಕುಮಾರಸ್ವಾಮಿ ಅಧಿಕಾರ ಹಿಡಿಯಬಹುದು. ಅದೆಲ್ಲಾ ದೈವೇಚ್ಛೆ, ನಾನೊಬ್ಬ ತಂದೆಯಾಗಿ ಮಗನ ಆರೋಗ್ಯ ಕಾಪಾಡಮ್ಮ ಎಂದು ಹಾಸಬಾಂಬೆಯಲ್ಲಿ ಬೇಡಿಕೊಂಡಿದ್ದೇನೆ ಎಂದಿದ್ದಾರೆ.

[related]

ಸಿದ್ದರಾಮಯ್ಯ ಮರಳಿ ಜೆಡಿಎಸ್‍ಗೆ ಬರುವ ವದಂತಿ ಬಗ್ಗೆ ಕೇಳಿದಾಗ ಹಾಗೆಲ್ಲಾ ಲಘುವಾಗಿ ಯಾರೂ ಮಾತನಾಡಬೇಡಿ, ಅವರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅವರ ನೇತೃತ್ವದಲ್ಲಿ ಮುಂದಿನ‌ ಚುನಾವಣೆ ನಡೆಯಬಹುದು ಎಂದು ಹೇಳಿದ್ದಾರೆ.

ಹಾಸನಾಂಬೆ ದರ್ಶನ ಪಡೆದ ಗೌಡರ ಕುಟುಂಬ

ಸಂಸದ ಎಚ್.ಡಿ. ದೇವೇಗೌಡರು, ಪತ್ನಿ ಚನ್ನಮ್ಮ , ಪುತ್ರ ರೇವಣ್ಣ, ಮಗಳು ಅನಸೂಯ, ಸೊಸೆ ಭವಾನಿ ಹಾಗೂ ಮೊಮ್ಮಕ್ಕಳು ಕುಟುಂಬ ಸಮೇತ ಬಂದು ಹಾಸನಾಂಬೆ ದರ್ಶನ ಪಡೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವೇಗೌಡರು ಪ್ರತಿವರ್ಷ ಹಾಸನಾಂಬ ದರ್ಶನ ಪಡೆಯುತ್ತಾರೆ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅಭಿಷೇಕ ಸೇರಿದಂತೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಇವರು ಬೆಳ್ಳಿ ತಟ್ಟೆಯಲ್ಲಿ ತಂದಿದ್ದ ಫಲ ತಾಂಬೂಲವನ್ಮು ಹಾಸನಾಂಬೆಗೆ ಅರ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry