7

ಆದರ್ಶ ಮಗಳು!

Published:
Updated:

‘ಮದುವೆ ಧಿಕ್ಕರಿಸಿದ ವಧು’ (ಪ್ರ.ವಾ., ಡಿ. 6) ವರದಿ ಓದಿ ವಿಷಾದವಾಯಿತು. ವರದಕ್ಷಿಣೆ ಎನ್ನುವುದೇ ಮುಜುಗರದ ಪದ. ಅಂಥದ್ದರಲ್ಲಿ, ಸುಶಿಕ್ಷಿತ ವೈದ್ಯ ಮನೆತನಗಳ ನಡುವೆ ವರದಕ್ಷಿಣೆಯ ಕಾರಣಕ್ಕೆ ಮದುವೆ ಮುರಿದುಬಿದ್ದ ವಿಷಯ ನಿಜವಾಗಿಯೂ ಕಳವಳಕಾರಿ.

ಮದುವೆ ಎಂಬುದು ಭಾವನಾತ್ಮಕ ಸಂಬಂಧ. ಅದು ‘ವ್ಯವಹಾರ’ವಾದರೆ ಸಂಬಂಧಕ್ಕೆ ಕುಂದುಂಟಾಗುತ್ತದೆ ಎಂಬ ಅರಿವು ತಂದೆ–ಮಗನಿಗೆ ಆಗದಿರು

ವುದು ವಿಪರ್ಯಾಸ. ಧೃತಿಗೆಡದ ವಧು, ನಯವಾಗಿವರನನ್ನೇ ತಿರಸ್ಕರಿಸುವ ಮೂಲಕ ಯುವತಿಯರಿಗೆ ಮೇಲ್ಪಂಕ್ತಿಯಾಗುವುದರ ಜೊತೆಗೆ ಪೋಷಕರ

ಹೊರೆಯನ್ನೂ ಕಡಿಮೆ ಮಾಡಿ ಆದರ್ಶ ಮಗಳಾಗಿದ್ದಾಳೆ.

ಇಷ್ಟಾದರೂ ನೋವನ್ನು ಮರೆತು, ಬಂದಿದ್ದ ಬಂಧು- ಮಿತ್ರರಿಗೆ ಅತಿಥಿ ಸತ್ಕಾರ ಮಾಡಿ ಖುಷಿಪಡಿಸಿ ವಿಷಯ ಹೇಳಿರುವುದು ಮನೋಧೈರ್ಯದ ಸಂಕೇತವೇ!

-ಎಂ.ಜೆ.ರುದ್ರಮೂರ್ತಿ, ಚಿತ್ರದುರ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry