7

ಗಡಿ ದಾಟಿ ಬಂದ ಭಾರತದ ಡ್ರೋಣ್‌ ಹೊಡೆದುರುಳಿಸಿದ್ದಾಗಿ ಹೇಳಿದ ಚೀನಾ

Published:
Updated:
ಗಡಿ ದಾಟಿ ಬಂದ ಭಾರತದ ಡ್ರೋಣ್‌ ಹೊಡೆದುರುಳಿಸಿದ್ದಾಗಿ ಹೇಳಿದ ಚೀನಾ

ಬೀಜಿಂಗ್‌: ಗಡಿ ದಾಟಿ ತನ್ನ ವಾಯುವ್ಯಾಪ್ತಿ ಪ್ರವೇಶಿಸಿದ ಭಾರತದ ಡ್ರೋಣ್‌ ಅನ್ನು ಹೊಡೆದುರುಳಿಸಿದ್ದಾಗಿ ಚೀನಾ ಗುರುವಾರ ಹೇಳಿದೆ.

‘ಭಾರತದ ಈ ನಡೆ ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥದ್ದು. ಚೀನಾ ಇದನ್ನು ತೀವ್ರವಾಗಿ ಖಂಡಿಸುತ್ತದೆ’ ಎಂದು ಸೇನಾಧಿಕಾರಿ ಜಾಂಗ್‌ ಶೂಯಿಲಿ ‘ಜಿನ್‌ಹುಅ’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಆದರೆ, ಎಲ್ಲಿ ಮತ್ತು ಯಾವಾಗ ಡ್ರೋಣ್‌ ಅನ್ನು ಹೊಡೆದುರುಳಿಸಲಾಗಿದೆ ಎಂಬ ಮಾಹಿತಿಯನ್ನು ಜಾಂಗ್‌ ಬಹಿರಂಗಪಡಿಸಿಲ್ಲ.

ಭಾರತ– ಚೀನಾ ಗಡಿಯ ಸಿಕ್ಕಿಂನ ಡೋಕ್ಲಾಮ್‌ನಲ್ಲಿ ಉಭಯ ಸೇನಾ ಪಡೆಗಳ ನಡುವಿನ ಸಂಘರ್ಷ ಕೊನೆಗೊಂಡ ಬಳಿಕ ಚೀನಾ ಈಗ ಡ್ರೋಣ್‌ ತಗಾದೆ ತೆಗೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry