ಪಕ್ಷಾಂತರಿಗಳಿಗೆ ಪಾಠ

7

ಪಕ್ಷಾಂತರಿಗಳಿಗೆ ಪಾಠ

Published:
Updated:

ಕರ್ನಾಟಕದ ವಿಧಾನಸಭೆಗೆ ಈ ಬಾರಿ ನಡೆದ ಚುನಾವಣೆಯಲ್ಲಿ ಹಲವು ಕ್ಷೇತ್ರಗಳ ಫಲಿತಾಂಶ ಪಕ್ಷಾಂತರಿಗಳಿಗೆ ಪಾಠ ಕಲಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ‘ಪಕ್ಷದಲ್ಲಿ ಉಸಿರು ಗಟ್ಟುವ ವಾತಾವರಣ, ಅಧ್ಯಕ್ಷರ ಸರ್ವಾಧಿಕಾರ ಧೋರಣೆ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ’ ಎಂಬೆಲ್ಲ ಸವಕಲು ಹೇಳಿಕೆಗಳನ್ನು ಕೊಡುವುದು ಟಿಕೆಟ್ ಆಕಾಂಕ್ಷಿಗಳಲ್ಲಿ ಸಾಮಾನ್ಯವಾಗಿತ್ತು.

ಸಂಘ ಪರಿವಾರದ ಹಿನ್ನೆಲೆಯಲ್ಲಿ ಬೆಳೆದ ಅಭ್ಯರ್ಥಿಗಳು ಜಾತ್ಯತೀತ ಮುಖವಾಡದಲ್ಲಿ ವಿಜೃಂಭಿಸಿದ್ದು, ಜಾತ್ಯತೀತ ಎನಿಸಿರುವ ಪಕ್ಷವೂ ಪ್ರಬಲ ಕೋಮು ಅಥವಾ ಸಮುದಾಯವನ್ನು ಪರಿಗಣಿಸಿ, ಆ ಕೋಮಿಗೆ ಸೇರಿದ ಅನ್ಯ ಪಕ್ಷದ ನಾಯಕರನ್ನು ಸೆಳೆದು ಟಿಕೆಟ್‌ ಕೊಟ್ಟದ್ದು ಈ ಬಾರಿಯ ಚುನಾವಣೆಯಲ್ಲಿ ವಿಶೇಷವಾಗಿತ್ತು.

ಚಾಣಾಕ್ಷ ಮತದಾರ ಇಂತಹ ಸಮಯಸಾಧಕ ರಾಜಕಾರಣಿಗಳಿಗೆ ಪಾಠ ಕಲಿಸಿದ್ದಾನೆ. ಇನ್ನು ಮುಂದಾದರೂ ಕರ್ನಾಟಕದಲ್ಲಿ ಅನುಕೂಲಸಿಂಧು ರಾಜಕಾರಣ ಕೊನೆಗಾಣಲಿ.

ಡಾ. ಸಮೀರ ಹಾದಿಮನಿ, ಆಲಮೇಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry