ಬಸ್‌ನಲ್ಲಿ ರಾಜಭವನದತ್ತ ಕಾಂಗ್ರೆಸ್‌ ಶಾಸಕರು; ಬಳಿಕ ರೆಸಾರ್ಟ್‌ಗೆ

7

ಬಸ್‌ನಲ್ಲಿ ರಾಜಭವನದತ್ತ ಕಾಂಗ್ರೆಸ್‌ ಶಾಸಕರು; ಬಳಿಕ ರೆಸಾರ್ಟ್‌ಗೆ

Published:
Updated:
ಬಸ್‌ನಲ್ಲಿ ರಾಜಭವನದತ್ತ ಕಾಂಗ್ರೆಸ್‌ ಶಾಸಕರು; ಬಳಿಕ ರೆಸಾರ್ಟ್‌ಗೆ

ಬೆಂಗಳೂರು: ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್‌ ಶಾಸಕರನ್ನು ಬಿಡದಿ ಸಮೀಪದ ಈಗಲ್ಟನ್‌ ರೆಸಾರ್ಟ್‌ಗೆ ಕರೆದೊಯ್ಯಲಾಗುತ್ತಿದೆ.

ಕೆಪಿಸಿಸಿ ಕಚೇರಿಯಿಂದ ಖಾಸಗಿ ಬಸ್‌ ಮೂಲಕ ಶಾಸಕರನ್ನು  ಮೊದಲು ರಾಜಭವನದಕ್ಕೆ ಕರೆದೊಯ್ಯಲಾಗುತ್ತಿದೆ. ಬಳಿಕ ರೆಸಾರ್ಟ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ.

ಸಂಜೆ 5 ಗಂಟೆಗೆ ರಾಜ್ಯಪಾಲರು ಭೇಟಿಗೆ ಕಾಂಗ್ರೆಸ್‌ ಶಾಸಕರಿಗೆ ಸಮಯ ನೀಡಿದ್ದಾರೆ. ಬೆಂಬಲ ಪತ್ರ ನೀಡಲಿರುವ ಶಾಸಕರಿಂದ ರಾಜ್ಯಪಾಲರ ಎದುರು ಪರೇಡ್‌ ನಡೆಯಲಿದೆ.

ಡಿ.ಕೆ.ಶಿವಕುಮಾರ್‌ ಶಾಸಕರನ್ನು ರೆಸಾರ್ಟ್‌ಗೆ ತಲುಪಿಸುವ ಜವಾಬ್ದಾರಿ ವಹಿಸಿದ್ದಾರೆ.

ನಗರದ ಶಾಂಗ್ರಿಲಾ ಹೋಟೆಲ್‌ನಿಂದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ರಾಜಭವನದ ಕಡೆಗೆ ಪ್ರಯಾಣಿಸಿದ್ದಾರೆ. ಕಾಂಗ್ರೆಸ್‌–ಜೆಡಿಎಸ್‌ ಶಾಸಕರು ಸರ್ಕಾರ ರಚನೆಗಾಗಿ ರಾಜ್ಯ‍ಪಾಲರಲ್ಲಿ ಮನವಿ ಮಾಡಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry