ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ಕ್ಕೆ ಸಕ್ಕರೆ ಬಳಕೆ 294 ಲಕ್ಷ ಟನ್‌ಗೆ

Last Updated 10 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಇದು ಸಿಹಿಗೆ ಸಂಬಂಧಿಸಿದ ಸುದ್ದಿಯೇ ಆಗಿದ್ದರೂ, ಜನರ ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಸವಿಯಾದ ವಿಚಾರವಲ್ಲ. ಆದರೆ, ದೇಶದ ಸಕ್ಕರೆ ತಯಾರಿಕೆ ವಲಯಕ್ಕೆ ಲಾಭದಾಯಕ ಎನಿಸು­ವಂತಹ ಸುದ್ದಿ!

ವೇಗವಾಗಿ ನಡೆಯುತ್ತಿರುವ ನಗರೀಕರಣ ಮತ್ತು ಬದಲಾಗು­ತ್ತಿರುವ ಜನರ ಆಹಾರ ಪದ್ಧತಿಯನ್ನು ಗಮನಿಸಿದರೆ ದೇಶದಲ್ಲಿ ಸಕ್ಕರೆ ಬಳಕೆ ಪ್ರಮಾಣ ಮುಂದಿನ ಐದು ವರ್ಷ­ಗಳಲ್ಲಿ 290 ಲಕ್ಷ ಟನ್‌ಗಳಿಗಿಂತಲೂ ಅಧಿಕವಾಗಿರಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಂದಾಜು ಮಾಡಿದೆ.

ವಿಶ್ವದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ 1687.30 ಲಕ್ಷ ಟನ್‌ಗಳಷ್ಟಿದೆ. ಇದರಲ್ಲಿ ಶೇ 15ರಷ್ಟು ದೊಡ್ಡ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದು ಅಸೋಚಾಂ ಅಧ್ಯಯನದಿಂದ ತಿಳಿದು­ಬಂದಿದೆ.

ದೇಶದ ಸಕ್ಕರೆ ಬಳಕೆ ಪ್ರತಿವರ್ಷ ಸರಾಸರಿ ಶೇ 2ರಷ್ಟು ಪ್ರಮಾಣ­ದಲ್ಲಿ ಏರಿಕೆ ಕಾಣುತ್ತಲೇ ಇದೆ. ಸದ್ಯ ವರ್ಷಕ್ಕೆ 260 ಲಕ್ಷ ಟನ್‌ ಸಕ್ಕರೆ ಬಳಕೆಯಾಗುತ್ತಿದ್ದು, 2019–20ರ ವೇಳೆಗೆ 293.50 ಲಕ್ಷ ಟನ್‌ಗಳಿಗೆ ತಲುಪಲಿದೆ ಎಂದು ವರದಿ ತಿಳಿಸಿದೆ.ಮೇರೆ ಮೀರಿರುವ ನಗರೀಕರಣ ಮತ್ತು ಆಹಾರ ಸಂಸ್ಕರಣಾ ವಲಯದಲ್ಲಿ ವಿಪರೀತ ಸಿಹಿ ಬಳಕೆಯಿಂದಾಗಿ ದೇಶದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ ಹೆಚ್ಚುತ್ತಿದೆ ಎಂದು ವರದಿ ವಿವರಿಸಿದೆ.

ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೃಷಿ ಪ್ರದೇಶದಲ್ಲಿ ಕಬ್ಬು ಬೆಳೆಯಬೇಕಿದೆ. ಜತೆಗೆ, ಅಧಿಕ ಇಳುವರಿಯ ಕಬ್ಬು ಬೆಳೆಯುವ ಮೂಲಕ ಸಕ್ಕರೆ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅಗತ್ಯವೂ ಇದೆ ಎಂದು ಅಸೋಚಾಂ ಅಧ್ಯಯನ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT