ಸೋಮವಾರ, ಮಾರ್ಚ್ 8, 2021
26 °C
ಹೃದಯ ರೋಗ ಮತ್ತು ಮಧುಮೇಹ

2020ರ ವೇಳೆಗೆ ಹೆಚ್ಚು ರೋಗಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2020ರ ವೇಳೆಗೆ ಹೆಚ್ಚು ರೋಗಿಗಳು

ಬೆಂಗಳೂರು:  ‘ಪ್ರಸ್ತುತ ಭಾರತದಲ್ಲಿ 90 ಲಕ್ಷ ಹೃದಯ ರೋಗಿಗಳಿದ್ದಾರೆ. ದೇಶವು 2020ರ ವೇಳೆಗೆ ಹೃದಯ ರೋಗ ಮತ್ತು ಮಧುಮೇಹ ಕಾಯಿಲೆಯಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನಕ್ಕೇರಲಿದೆ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಆತಂಕ ವ್ಯಕ್ತಪಡಿಸಿದರು.ನಗರದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 19ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ನಗರ ಪ್ರದೇಶಗಳಲ್ಲಿ   ಶ್ರಮ ರಹಿತ ಅನಾರೋಗ್ಯಕರ ಜೀವನ ಶೈಲಿಯಿಂದಾಗಿಯೇ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂದು ಒಟ್ಟು ಕಾಯಿಲೆಗಳ ಪೈಕಿ ಶೇ 50 ರಷ್ಟು ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳಾಗಿವೆ’ ಎಂದು ಹೇಳಿದರು.‘ಸಾಮಾನ್ಯ ವ್ಯಕ್ತಿಗಿಂತ ಧೂಮಪಾನ ಮಾಡುವವರಲ್ಲಿ ಹೃದಯ ತೊಂದರೆ ಪ್ರಮಾಣ ಐದು ಪಟ್ಟು ಹೆಚ್ಚು ಇರುತ್ತದೆ.  ದುರದೃಷ್ಟವಶಾತ್‌, ಇಂದಿನ ಯುವ ಜನರಿಗೆ ಧೂಮಪಾನ, ಮದ್ಯಪಾನ ಶೋಕಿಯಾಗುತ್ತಿದೆ.  ಇಂದು ಹೃದಯದ ಸಮಸ್ಯೆಗೆ ಒಳಗಾದವರಲ್ಲಿ ಶೇ 25 ರಷ್ಟು ಜನರು 40 ವರ್ಷದ ಒಳಗಿನವರಾಗಿದ್ದಾರೆ. ಇದು ಆತಂಕದ ಸಂಗತಿ’ ಎಂದು ತಿಳಿಸಿದರು.‘ಹೃದಯಘಾತಕ್ಕೆ ಒಳಗಾದವರನ್ನು ಮೂರು ಗಂಟೆಗಳ ಒಳಗೆ ಸಮೀಪದ ಆಸ್ಪತ್ರೆಗೆ ದಾಖಲಿಸಿದರೆ ಅಪಾಯದ ಪ್ರಮಾಣ ಕಡಿಮೆಗೊಳಿಸಬಹುದು. ಇಲ್ಲದಿದ್ದರೆ ಪ್ರತಿ 30 ನಿಮಿಷಕ್ಕೆ ಸಾವಿನ ಅಪಾಯ ಶೇ 7ರಷ್ಟು ಅಧಿಕವಾಗುತ್ತದೆ’ ಎಂದು ಡಾ. ಮಂಜುನಾಥ್‌ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.