ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರ ಒಲಿಂಪಿಕ್ಸ್‌ ಆತಿಥ್ಯ ಯಾರಿಗೆ?

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬ್ಯೂನಸ್‌ ಐರಿಸ್‌ (ಎಎಫ್‌ಪಿ): ಅಂತ­ರ­ರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ 125ನೇ ಮಹಾ ಸಮ್ಮೇ­ಳನದಲ್ಲಿ ಮೂರು ಪ್ರಮುಖ ವಿಷಯಗಳು ಚರ್ಚೆಯಾಗ­ಲಿವೆ. ಐಒಸಿ ಮುಂದಿನ ಅಧ್ಯಕ್ಷರ ಆಯ್ಕೆಯೂ ಇದರಲ್ಲಿ ಒಂದಾ­ಗಿದೆ. 2016ರ ಒಲಿಂಪಿಕ್ಸ್‌ ರಿಯೋ ಡಿ ಜನೈರೋದಲ್ಲಿ ನಡೆಯ­ಲಿದೆ. ಆದರೆ, 2020ರ ಒಲಿಂ­ಪಿಕ್ಸ್‌ಗೆ ಆತಿಥ್ಯ ವಹಿಸಲು ಮ್ಯಾಡ್ರಿರ್ಡ್‌, ಟೋಕಿಯೊ ಮತ್ತು ಇಸ್ತಾಂಬುಲ್‌ ನಡುವೆ ಪೈಪೋಟಿ ಏರ್ಪಟ್ಟಿದೆ.

‘2020ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ರಾಷ್ಟ್ರಗಳ ನಿರ್ಧಾರ ಮತ್ತು ಸ್ಥಾನ ಪಡೆಯುವ ಕ್ರೀಡೆಗಳ ಬಗ್ಗೆ ಪಾರದರ್ಶಕವಾಗಿ, ನ್ಯಾಯಯು­ತವಾಗಿ ತೀರ್ಮಾನ ಕೈಗೊಳ್ಳುತ್ತೇವೆ. ಇದರಲ್ಲಿ ಯಾವುದೇ ತಾರತಮ್ಯ ನಡೆಯುವುದಿಲ್ಲ’ ಎಂದು ಐಒಸಿ ಅಧ್ಯಕ್ಷ ಜಾಕಸ್‌ ರೋಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT