ಬುಧವಾರ, ಜನವರಿ 29, 2020
27 °C

2022ರ ಫಿಫಾ ವಿಶ್ವಕಪ್‌ಗೆ ಭಾರತ ಅರ್ಹತೆ: ಸಚಿನ್ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಭಾರತ ತಂಡ 2022ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಅರ್ಹತೆ ಪಡೆಯಲಿದೆ ಎಂಬ ವಿಶ್ವಾಸವನ್ನು ಸಚಿನ್ ತೆಂಡೂಲ್ಕರ್ ವ್ಯಕ್ತಪಡಿಸಿದ್ದಾರೆ.‘2017ರ ಫಿಫಾ ಜೂನಿಯರ್‌ (17 ವರ್ಷ ವಯಸ್ಸಿನೊಳಗಿನವರ) ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ. ಸೀನಿಯರ್‌ ತಂಡ 2022ರ ವಿಶ್ವಕಪ್‌ಗೆ ಅರ್ಹತೆ ಪಡೆಯುವ ವಿಶ್ವಾಸ ನನ್ನದು’ ಎಂದು ಕೋಲ್ಕತ್ತದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ನುಡಿದಿದ್ದಾರೆ.‘ನಾವು ಹಂತ ಹಂತವಾಗಿ ಮುನ್ನಡೆಯಬೇಕು, ಯಾರಿಗೂ ಒಮ್ಮೆಲೇ 100ನೇ ಮಹಡಿಗೆ ಏರಲು ಸಾಧ್ಯವಿಲ್ಲ. ಮೊದಲನೇ ಮಹಡಿಯಿಂದ ಪ್ರಾರಂಭಿಸಿದರೆ ಮಾತ್ರ ಕಟ್ಟಡದ ತುದಿಗೆ ಏರಲು ಸಾಧ್ಯ’ ಎಂದಿದ್ದಾರೆ.‘ವಿಶ್ವಕಪ್‌ನಂತಹ ಪ್ರಮುಖ ಟೂರ್ನಿ ಯಲ್ಲಿ ಪಾಲ್ಗೊಳ್ಳುವುದು ಅಷ್ಟು ಸುಲಭ ವಲ್ಲ. ಸುದೀರ್ಘ ಪಯಣದಿಂದ ಮಾತ್ರ ಅದು ಸಾಧ್ಯ. ಜೂನಿಯರ್‌ ವಿಶ್ವಕಪ್‌ ಭಾರತದಲ್ಲಿ ನಡೆಯಲಿರುವ ಕಾರಣ ಯುವ ಆಟಗಾರರಿಗೆ ಸಾಮರ್ಥ್ಯ ತೋರಿಸಲು ಉತ್ತಮ ವೇದಿಕೆ ಲಭಿಸಿದೆ’ ಎಂದು ಸಚಿನ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)