ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2050ರ ನಂತರ ವಿಶ್ವ ಜನಸಂಖ್ಯೆ ಸ್ಥಿರ?

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಈ ಶತಮಾನದ ಮಧ್ಯಭಾಗದಲ್ಲಿ ವಿಶ್ವ ಜನಸಂಖ್ಯೆ ಪ್ರಮಾಣ ಸ್ಥಿರವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಜನಸಂಖ್ಯೆ ಪ್ರಮಾಣವನ್ನು ನಿರ್ಧರಿಸಲು ಖಗೋಳವಿಜ್ಞಾನಿಗಳು ಅನುಸರಿಸಿದ ಮಾದರಿ ಮತ್ತು ಜನಸಂಖ್ಯೆ ಇಳಿಮುಖದ ಬಗ್ಗೆ ವಿಶ್ವಸಂಸ್ಥೆಯ ಪೂರ್ವಾನುಮಾನದ ಅಂಕಿ-ಅಂಶಗಳಲ್ಲಿ ಸಮಾನ ಹೋಲಿಕೆ ಇದೆ ಎಂದು ಸ್ಪೇನ್ ಮೂಲದ ವೈಜ್ಞಾನಿಕ ಮಾಹಿತಿ ಮತ್ತು ಸುದ್ದಿ ಸೇವಾ ಸಂಸ್ಥೆ (ಎಸ್‌ಐಎನ್‌ಸಿ) ವರದಿ ಮಾಡಿದೆ.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 2100ರಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆ ಗರಿಷ್ಠ 1580 ಕೋಟಿ ಮತ್ತು ಕನಿಷ್ಠ 620 ಕೋಟಿ ಆಸುಪಾಸಿನಲ್ಲಿ ಇರಲಿದೆ. ಈಗಿರುವ 700 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಇದು ತೀರ ಕಡಿಮೆ ಎಂದು ವಿವರಿಸಿದೆ.

ಜನಸಂಖ್ಯೆ ಕುರಿತು ಗಣಿತಶಾಸ್ತ್ರೀಯ ಮಾದರಿಯನ್ನು ಅಭಿವೃದ್ಧಿಪಡಿಸಿರುವ ಮ್ಯಾಡ್ರಿಡ್ ಮತ್ತು ಸಿಇಯು-ಸ್ಯಾನ್ ಪ್ಯಾಬ್ಲೊ ವಿಶ್ವವಿದ್ಯಾಲಯದ ವಿಜ್ಞಾನಿಗಳು, 21ನೇ ಶತಮಾನದ ಮಧ್ಯಭಾಗದಲ್ಲಿ ಜನಸಂಖ್ಯೆ ಸ್ಥಿರವಾಗಿರಲಿದೆ ಮತ್ತು ಆ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕೂಡ ಆಗಬಹುದು ಎಂದು ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT