ಬುಧವಾರ, ಮೇ 12, 2021
18 °C

`21ನೇ ಶತಮಾನ ಒತ್ತಡದ ಯುಗ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಎಲ್ಲಿ ನೋಡಿದರೂ ಅಶಾಂತಿ ವಾತಾವರಣ ಕಂಡು ಬರುತ್ತಿದ್ದು, 21ನೇ ಶತಮಾನ ತಂತ್ರಜ್ಞಾನ ಯುಗವಲ್ಲ, ಒತ್ತಡದ ಯುಗ ಎಂದು ಸುಲಫಲ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರ ಹೊರವಲಯದ ಧರಿಯಾಪುರ ಕೋಟನೂರ (ಡಿ) ಬಡಾವಣೆಯಲ್ಲಿ ಭಾನುವಾರ ಏರ್ಪಡಿಸಿದ್ದ `ರಾಜಯೋಗ ಶಿಕ್ಷಣ ಹಾಗೂ ಸಮಾಜ ಸೇವಾ ಪ್ರಶಿಕ್ಷಣ ಕೇಂದ್ರ'ದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. `ಹವಾನಿಯಂತ್ರಿತ ಕೊಠಡಿ, ಕಾರು, ಬಂಗಲೆ ಏನೆಲ್ಲಾ ಇದ್ದರೂ ಮನುಷ್ಯನಿಗೆ ಒತ್ತಡದಿಂದ ಪಾರಾಗುವುದು ಸಾಧ್ಯವಾಗುತ್ತಿಲ್ಲ. ಟಿವಿಗಳಲ್ಲಿ ಮನಶಾಶಾಂತಿ ಹುಡುಕಿದರೂ ಸಿಗುವುದಿಲ್ಲ. ಓ ಶಾಂತಿ ಕೇಂದ್ರದಲ್ಲಿ ಶಾಂತಿ ಕಾಣಬಹುದು' ಎಂದು ಹೇಳಿದರು.ಪ್ರಾಮಾಣಿಕತೆ, ಕಾಯಕ ಶುದ್ಧಿಯಿಂದ ಕೂಡಿದ ಈಶ್ವರೀಯ ವಿದ್ಯಾಲಯದಲ್ಲಿ ನಿಜವಾದ ಸ್ವರ್ಗವನ್ನು ಕಾಣಬಹುದು. ಮನುಷ್ಯನಿಗೆ ಶಾಂತಿ ಮಾರ್ಗ ತೋರಿಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, `ಗುಲ್ಬರ್ಗದಲ್ಲಿ ಹೆಚ್ಚು ಸತ್ಸಂಗ ನಡೆಯಬೇಕೆನ್ನುವ ಉದ್ದೇಶದಿಂದ ಅರುಣಾ ಸಿ. ಪಾಟೀಲ ಅವರು ಶಾಸಕರ ಅನುದಾನದಲ್ಲಿ ಈ ನಿವೇಶನವನ್ನು ಮಂಜೂರು ಮಾಡಿಸಿದರು. ಓಂ ಶಾಂತಿ ಕೇಂದ್ರದ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು' ಎಂದು ಘೋಷಿಸಿದರು.ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ ಮಾತನಾಡಿ, `ಧರ್ಮಕ್ಷೇತ್ರಗಳಿಗೆ ನೆಮ್ಮದಿ ಹುಡುಕಿಕೊಂಡು ಹೋದವರು ಸಾವನ್ನಪ್ಪುತ್ತಿದ್ದಾರೆ. ರಾಜಯೋಗ ಶಿಕ್ಷಣದ ಮೂಲಕ ಶಾಂತಿ, ನೆಮ್ಮದಿ ಹಂಚುತ್ತಿರುವ ಈಶ್ವರೀಯ ವಿದ್ಯಾಲಯ ಕಾರ್ಯ ಶ್ಲಾಘನೀಯ' ಎಂದರು.

ಮೌಂಟ್ ಅಬು ಬ್ರಹ್ಮಕುಮಾರೀಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಬಿ.ಕೆ. ಮೋಹನ ಸಿಂಘಾಲ ಶಿಲಾನ್ಯಾಸ ನೆರವೇರಿಸಿದರು. ಬಿ.ಕೆ. ರತ್ನಾಜಿ ಅಧ್ಯಕ್ಷತೆ ವಹಿಸಿದ್ದರು.ಗುಲ್ಬರ್ಗ ಈಶ್ವರಿ ವಿಶ್ವ ವಿದ್ಯಾಲಯದ ಉಪ ವಲಯ ನಿರ್ದೇಶಕಿ ಬಿ.ಕೆ. ಪ್ರೇಮಸಿಂಗ ಭಾಯಿ, ಸಂಸ್ಥೆಯ ವಿಜಯಾ, ಮಹಾದೇವಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.