21ರಿಂದ ಬಹುಮಾಧ್ಯಮ ಪ್ರಚಾರಾಂದೋಲನ

7

21ರಿಂದ ಬಹುಮಾಧ್ಯಮ ಪ್ರಚಾರಾಂದೋಲನ

Published:
Updated:

ಬಸವಕಲ್ಯಾಣ: ವಾರ್ತಾ ಮತ್ತು ಪ್ರಚಾರ ಇಲಾಖೆ, ತಾಲ್ಲೂಕು ಆಡಳಿತದಿಂದ ಬಸವಕಲ್ಯಾಣ ತಾಲ್ಲೂಕಿನ 120 ಗ್ರಾಮಗಳಲ್ಲಿ ಫೆಬ್ರುವರಿ 21 ರಿಂದ ಮಾರ್ಚ್ 1 ರವರೆಗೆ ಗುಲ್ಬರ್ಗ ವಿಭಾಗ ಮಟ್ಟದ ಬಹುಮಾಧ್ಯಮ ಪ್ರಚಾರಾಂದೋಲನ ನಡೆಯಲಿದೆ.21 ರಂದು ಬೆಳಿಗ್ಗೆ 10 ಗಂಟೆಗೆ ಬಸವಕಲ್ಯಾಣದ ಹಳೆಯ ತಹಸೀಲ ಕಚೇರಿ ಆವರಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಉದ್ಘಾಟಿಸುವರು. ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ ಶಾಸಕ ರಾಜಶೇಖರ ಪಾಟೀಲ ಹುಮನಾಬಾದ್, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದ್ರೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗುರುಲಿಂಗಪ್ಪ ಸೈದಾಪುರೆ, ಸಹಾಯಕ ಆಯುಕ್ತ ಎಚ್.ಪ್ರಸನ್ನಕುಮಾರ ಹಾಗೂ ಇತರರು ಪಾಲ್ಗೊಳ್ಳುವರು.ಪ್ರಚಾರಾಂದೋಲನದ ಸಂದರ್ಭದಲ್ಲಿ ಪ್ರತಿ ಗ್ರಾಮದಲ್ಲಿ ವಸ್ತು ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಬೀದಿ ನಾಟಕ, ಜಾನಪದ ಸಂಗೀತ ಹಮ್ಮಿಕೊಳ್ಳಲಾಗುತ್ತದೆ. ಜಾನುವಾರು ಆರೋಗ್ಯ ತಪಾಸಣಾ ಶಿಬಿರ ಸಹ ನಡೆಯಲಿದೆ ಎಂದು ತಿಳಿಸಲಾಗಿದೆ.ಒಟ್ಟು 6 ಪ್ರಚಾರ ಘಟಕಗಳನ್ನಾಗಿ ರಚಿಸಲಾಗಿದ್ದು ಪ್ರತಿದಿನ ಒಂದೊಂದು ಘಟಕದಿಂದ ಎರಡೆರಡು ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಯುತ್ತದೆ. 21 ರಂದು ಬಸವಕಲ್ಯಾಣದ ಕೋಟೆ ಹತ್ತಿರ, ಏಕಲೂರ, ಯಳವಂತಗಿ ಶಿವಪುರ, ಮೈಸಲಗಾ, ಧರ್ಮಪ್ರಕಾಶ ಗಲ್ಲಿ, ಜನವಾಡಾ, ತ್ರಿಪುರಾಂತ, ಹಾಮುನಗರ, ಸಸ್ತಾಪುರ, ಅಟೋನಗರಗಳಲ್ಲಿ ಕಾರ್ಯಕ್ರಮ ನಡೆಯುತ್ತದೆ.22 ರಂದು ಬಾಗಹಿಪ್ಪರ್ಗಾ, ಸೈದಾಪುರ, ಚಿಕ್ಕನಾಗಾಂವ, ಹತ್ಯಾಳ ತಾಂಡಾ, ಹಾರಕೂಡ, ಮುಡಬಿ, ಖೇರ್ಡಾ, ಶರಣನಗರ, ಗದ್ಲೆಗಾಂವ, ಬಗದೂರಿ, ಸಿರಗಾಪುರ, ಯರಂಡಿಗಳಲ್ಲಿ 23 ರಂದು ಖಾನಾಪುರ, ರಾಜೇಶ್ವರ, ಘಾಟ ಹಿಪ್ಪರ್ಗಾ, ಇಸ್ಲಾಂಪುರ, ಯರಬಾಗ, ಲಿಂಗದಳ್ಳಿ, ಪಂಢರಗೇರಾ, ಮಂಗಳೂರ, ಸದಲಾಪುರ, ಸುಂಠಾಣ, ಖೇರ್ಡಾ(ಬಿ), ರಾಜೋಳಾಗಳಲ್ಲಿ ಪ್ರದರ್ಶನ ನಡೆಯುತ್ತದೆ.24 ರಂದು ಗೊಗ್ಗ, ಹಂದ್ರಾಳ(ಕೆ), ತಡೋಳಾ, ಸಸ್ತಾಪುರ, ಕೌಡಿಯಾಳ, ಮಿರ್ಜಾಪುರ, ಕೌಡಿಯಾಳ(ಆರ್) ಅತ್ಲಾಪುರ, ನಿರ್ಗುಡಿ, ಗುಂಡೂರ, ರೋಳಾ, ಜಾಫರವಾಡಿಗಳಲ್ಲಿ ಮತ್ತು 25 ರಂದು ಉರ್ಕಿ, ಭೋಸಗಾ, ಇಲ್ಲಾಳ, ಯಲ್ಲದಗುಂಡಿ, ಮಂಠಾಳ, ವಡ್ಡರ್ಗಾ, ಕಾಂಬಳೆವಾಡಿ, ಸಿರೂರಿ, ಬಟಗೇರಾ, ಆಲಗೂಡ, ರಾಮತೀರ್ಥಗಳಲ್ಲಿ ಹಾಗೂ 26 ರಂದು ಗಿಲಗಿಲಿ, ಗದ್ಲೇಗಾಂವ(ಕೆ), ಸಿರಗೂರ, ಕೊಹಿನೂರ್, ಹತ್ತರ್ಗಾ, ಚಿತ್ತಕೋಟಾ(ಬಿ), ಚಿತ್ತಕೋಟಾ(ಕೆ), ಅಟ್ಟೂರ್, ಸರಜವಳಗಾ, ಲಾಡವಂತಿ, ಉಜಳಂಬ, ಭಕನಾಳ ತಾಂಡಾಗಳಲ್ಲಿ ನಡೆಯುತ್ತದೆ.27 ರಂದು ಧಾಮೂರಿ, ಘೋಟಾಳ, ಮನ್ನಳ್ಳಿ ಜಾಜನಮುಗಳಿ, ಏಕಂಬಾ, ಹೊನ್ನಳ್ಳಿ, ಮೋರಖಂಡಿ, ಚಂಡಕಾಪುರ, ತಳಭೋಗ, ರಾಮತೀರ್ಥ(ಕೆ), ಕೊಂಗೆವಾಡಿ, ಉಮಾಪುರಗಳಲ್ಲಿ ಮತ್ತು 28 ರಂದು ಹಳ್ಳಿ, ಗುತ್ತಿ, ಪ್ರತಾಪುರ, ಮುಚಳಂಬ, ನೀಲಕಂಠ, ಮುಸ್ತಾಪುರ, ನಾರಾಯಣಪುರ, ಬೇಟಬಾಲ್ಕುಂದಾ, ಹುಲಗುತ್ತಿ, ಖಂಡಾಳ, ಬೇಲೂರ, ಖಾನಾಪುರ(ಕೆ), 29 ರಂದು ಗೌರ, ಗೋಕುಳ, ಧನ್ನೂರ(ಕೆ), ತೊಗಲೂರ, ಕಾದೆಪುರ, ಕಾದರಾಬಾದವಾಡಿ, ಲಿಂಬಾಪುರ, ಹಾಲಹಳ್ಳಿ, ಗಡಿರಾಯಪಳ್ಳಿ, ಗೋರ್ಟಾ, ಕಿಟ್ಟಾ, ಮಿರಖಲನಲ್ಲಿ,ಮಾರ್ಚ್ 1 ರಂದು ಕೋಟಮಾಳ, ಯದ್ಲಾಪುರ, ಹುಲಸೂರ, ಜಾನಾಪುರ, ಸೋಲದಾಬಕಾ, ಲಾಹೇಶ್ವರ, ಗಡಿಗೌಡಗಾಂವ, ದೇವನಾಳ, ಮಾಚನಾಳ ಮತ್ತು ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ ಹತ್ತಿರ, ಭೀಮನಗರ ಮತ್ತು ಗಾಂಧಿ ವೃತ್ತದಲ್ಲಿ ಪ್ರಚಾರಾಂದೋಲನ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry