21ರಿಂದ ವರ್ಬಾಟಲ್‌ ಕನ್ನಡ ಚರ್ಚಾ ಸ್ಪರ್ಧೆ

7

21ರಿಂದ ವರ್ಬಾಟಲ್‌ ಕನ್ನಡ ಚರ್ಚಾ ಸ್ಪರ್ಧೆ

Published:
Updated:

ಬೆಂಗಳೂರು: ವರ್ಬಾಟಲ್‌ ಫೌಂಡೇ­ಷನ್‌ ವತಿಯಿಂದ ಶಾಲಾ ಮಕ್ಕಳಿಗಾಗಿ ಕನ್ನಡ ಚರ್ಚಾ ಸ್ಪರ್ಧೆ­ಯನ್ನು ಇದೇ 21ರಿಂದ 31ರವರೆಗೆ ಆಯೋಜಿಸ­ಲಾಗಿದೆ.ಜ. 21 ಹಾಗೂ 22ರಂದು ಹುಬ್ಬಳ್ಳಿ­­ಯಲ್ಲಿ, 24ರಿಂದ 31ರ ವರೆಗೆ ಬೆಂಗಳೂರಿನಲ್ಲಿ ಈ ಸ್ಪರ್ಧೆ ನಡೆಯ­ಲಿದೆ. ಸ್ಪರ್ಧಾಪೂರ್ವ ಆಯ್ಕೆಯಲ್ಲಿ 2,000 ವಿದ್ಯಾರ್ಥಿಗಳು ಹಾಗೂ ನೇರ ಸ್ಪರ್ಧೆಯಲ್ಲಿ 600 ವಿದ್ಯಾರ್ಥಿಗಳು ಭಾಗವಹಿಸುವರು. 12ರಿಂದ 16 ವರ್ಷ­ದ ವಿದ್ಯಾರ್ಥಿ­ಗಳು ಸ್ಪರ್ಧೆಯಲ್ಲಿ ಭಾಗವಹಿಸ­ಬಹುದು. ಒಂದು ತಂಡ­ದಲ್ಲಿ ಇಬ್ಬರು ಸ್ಪರ್ಧಿಗಳು ಇರಬ­ಹುದು.ಪ್ರತಿ ಚರ್ಚೆಗೆ ಮೂರು ತಂಡ­ಗಳು ಪಾಲ್ಗೊ­ಳ್ಳಲಿವೆ. ಮೊದಲನೇ ಬಹು­ಮಾನ ರೂ. ­30,000. ಅಂತಿಮ ಸುತ್ತು ತಲುಪಿದ ಎರಡು ತಂಡಗಳಿಗೆ ತಲಾ ರೂ. 5,000, ಮೊದಲನೇ ಬಹು­ಮಾನ ಪಡೆದ ತಂಡದ ಶಿಕ್ಷಕರಿಗೆ ರೂ. 5,000 ಬಹು­ಮಾನ ನೀಡಲಾಗು­ವುದು. ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ ರೂ. 200. ಭಾಗವಹಿಸುವ ಪ್ರತಿ ಸರ್ಕಾರಿ ಶಾಲೆ­ಯಿಂದ ಒಂದು ತಂಡಕ್ಕೆ ಪ್ರವೇಶ ಶುಲ್ಕ ವಿನಾಯಿತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ: 080–4251 1111 ಸಂಪರ್ಕಿಸಬಹುದು. ಇ ಮೇಲ್‌ verbattle@gmail.com ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry