21,196.18 ಕಿ.ಮೀ ಮಹಾಗೋಡೆ!

7

21,196.18 ಕಿ.ಮೀ ಮಹಾಗೋಡೆ!

Published:
Updated:
21,196.18 ಕಿ.ಮೀ ಮಹಾಗೋಡೆ!

ಬೀಜಿಂಗ್ (ಪಿಟಿಐ): ಸುಮಾರು 2,200 ವರ್ಷಗಳಿಗೂ ಹಿಂದೆ ಕಟ್ಟಿದ ಚೀನಾದ ಮಹಾ ಗೋಡೆಯ ಉದ್ದ ಇಂದಿಗೂ ನಿಗೂಢವಾಗಿಯೇ ಇದೆ.  ಇದು 8,851.8 ಕಿ.ಮೀ ಉದ್ದ ಇದೆ ಎಂದು ಈ ಮೊದಲು ಮಾಡಿದ ಅಳತೆಯಿಂದ ಗೊತ್ತಾಗಿತ್ತು. ಆದರೆ ಹೊಸ ಅಧ್ಯಯನದ ಪ್ರಕಾರ ಇದು ಈ ಹಿಂದಿನ ಅಳತೆಗಿಂತಲೂ 2.4ರಷ್ಟು ಉದ್ದ ಇದೆ. ಪುರಾತತ್ವಜ್ಞರು ಈ ಮಹಾ ಗೋಡೆಗೆ ಸಂಬಂಧಿಸಿದ 43,721 ಸ್ಥಳಗಳನ್ನು ಗುರುತಿಸಿದ್ದಾರೆ. ಅಲ್ಲದೇ ಇದು  21,196.18 ಕಿ.ಮೀ ಉದ್ದ ಇದೆ ಎಂದು ಹೇಳಿದ್ದಾರೆ.ಈ ಮೊದಲು ಮಿಂಗ್ ರಾಜಮನೆತನ (1368-1644)ಕಟ್ಟಿದ ಗೋಡೆಯನ್ನು ಮಾತ್ರ ಅಳೆಯಲಾಗಿತ್ತು. ಆದರೆ ಈಗ ಉಳಿದ ರಾಜಮನೆತನಗಳ ಅವಧಿಯಲ್ಲಿ ಕಟ್ಟಲಾದ ಗೋಡೆಯನ್ನೂ ಅಳೆಯಲಾಗಿದ್ದು, ಇದರ ಒಟ್ಟು ಉದ್ದ 21,196.18 ಕಿ.ಮೀ ಇದೆ ಎಂದು ಚೀನಾ ಗ್ರೇಟ್ ವಾಲ್ ಸೊಸೈಟಿ ನಿರ್ದೇಶಕ ಯಾನ್ ಜಿಯಾಮಿನ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry