ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ರಂದು ಚಾಮರಾಜೇಶ್ವರಸ್ವಾಮಿ ರಥೋತ್ಸವ

Last Updated 11 ಜುಲೈ 2013, 7:11 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ ಜುಲೈ 21ರಂದು ವಿಜೃಂಭಣೆಯಿಂದ ನಡೆಯಲಿದೆ.
ಅಂದು ಪೂರ್ವಾಷಾಢ ನಕ್ಷತ್ರದಲ್ಲಿ ಪ್ರಾತಃಕಾಲ 10.55ರಿಂದ 11.45ರ ಕನ್ಯಾ ಲಗ್ನದಲ್ಲಿ ಶ್ರೀ ಮನ್ನಹಾರಥಾರೋಹಣ ಅನಂತರ ಹಂಸಾರೋಹಣಾನಂತರ ನಟೇಶೋತ್ಸವ ನಡೆಯಲಿದೆ.

ರಥೋತ್ಸವದ ಅಂಗವಾಗಿ ಜುಲೈ 14ರಿಂದ 25ರವರೆಗೆ ದೇವಾಲಯದಲ್ಲಿ ವಿಶೇಷ ಪೂಜಾ, ಸೇವಾ ಉತ್ಸವಾದಿ ಕೈಂಕರ್ಯ ನಡೆಯಲಿದೆ.

ಜುಲೈ 14ರಂದು ಅಂಕುರಾರ್ಪಣ ಪೂರ್ವಕ ವೃಷಭಾದಿವಾಸ, ಜುಲೈ 15ರಂದು ಮಧ್ಯಾಹ್ನ 12ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ಧ್ವಜಾರೋಹಣಪೂರ್ವಕ ಭೇರಿ ತಾಡನಾ ನಂತರ ಶಿಬಿಕಾರೋಹಣೋತ್ಸವ, ಜುಲೈ 16ರಂದು ಚಂದ್ರ ಮಂಡಲಾರೋಹಣೋತ್ಸವ, ಜುಲೈ 17ರಂದು ಅನಂತ ಪೀಠಾರೋಹಣೋತ್ಸವ, ಜುಲೈ 18ರಂದು ಪುಷ್ಪ ಮಂಟಪಾರೋಹಣೋತ್ಸವ, ಜುಲೈ 19ರಂದು ವೃಷಭಾರೋಹಣೋತ್ಸವ, ಜುಲೈ 20ರಂದು ವಸಂತೋತ್ಸವ ಪೂರ್ವಕ ನಡೆಯಲಿದೆ.

ಜುಲೈ 22ರಂದು ಮಗಯಾತ್ರಾ ಪೂರ್ವಕ ಅಶ್ವರೋಹಣಾನಂತರ ಮಹಾಭೂತಾರೋಹಣ, ಜುಲೈ 23ರಂದು ಹಗಲು ಚೂಣೋತ್ಸವ ಪೂರ್ವಕ ಅವಭತ ತೀರ್ಥಸ್ನಾನ, ರಾತ್ರಿ ಧ್ವಜಾರೋಹಣ, ಮೌನಬಲಿ ನಡೆಯಲಿದೆ. ಜುಲೈ 24ರಂದು ಪುಷ್ಪಯಾಗ ಪೂರ್ವಕ ಕೈಲಾಸಯಾನಾ ರೋಹಣೋತ್ಸವ, 25ರಂದು ಮಹಾಸಂಪ್ರೋಕ್ಷಣ ಪೂರ್ವಕ ನಂದಿವಾಹನೋತ್ಸವ ನಡೆಯಲಿದೆ ಎಂದು ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT