ಭಾನುವಾರ, ಜನವರಿ 19, 2020
27 °C

22ರಂದು ಅಖಿಲ ಭಾರತ ಶ್ವಾನ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮೈಸೂರು ಕೆನೆಲ್ ಕ್ಲಬ್ ವತಿಯಿಂದ ಜ.22ರಂದು ಬೆಳಿಗ್ಗೆ 9ಕ್ಕೆ ಅಖಿಲ ಭಾರತ ಶ್ವಾನಗಳ ಪ್ರದರ್ಶನ ಹೆಬ್ಬಾಳದ ಡೇರಿ ಕಾಲೇಜಿನ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ~ ಎಂದು ಕೆನೆಲ್ ಕ್ಲಬ್‌ನ ಪೋಷಕ ಡಾ.ಬಿ.ಸಿ.ರಾಮಕೃಷ್ಣ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಪ್ರದರ್ಶನದಲ್ಲಿ ದೇಶದ ಹಲವಾರು ರಾಜ್ಯಗಳಿಂದ ಸುಮಾರು 44 ವಿವಿಧ ತಳಿಗಳಿಗೆ ಸೇರಿದ 535 ಕ್ಕೂ ಹೆಚ್ಚು ಶೇಷ್ಠ ದರ್ಜೆಯ ಶ್ವಾನಗಳು ಭಾಗವಹಿಸುತ್ತಿವೆ~ ಎಂದರು.

 

`ವಿಶೇಷ ತಳಿಗಳಾದ ಡಾಗೋ ಕೆನಾರಿಯೋ, ಅಖಿತ, ಡಾಗ್-ಡಿ-ಬೋರ್‌ಡೇಕ್ಸ್, ಸಲೂಕಿ, ಸೈಬೀರಿಯನ್ ಹಸ್ಕಿಗಳೊಂದಿಗೆ ಜನಪ್ರಿಯ ತಳಿಗಳಾದ ಜರ್ಮನ್ ಶೆಫರ್ಡ್, ಡಾಬರ್ ಮ್ಯಾನ್, ಲೇಬ್ರಡಾರ್, ಗೋಲ್ಡನ್ ರಿಟ್ರೀವರ್, ಬಾಕ್ಸರ್, ಗ್ರೇಟ್ ಡೇನ್‌ಮತ್ತು ಮುಧೋಳ ತಳಿಯ ಶ್ವಾನಗಳು ವಿಶೇಷವಾಗಿ ಪ್ರದರ್ಶನಗೊಳ್ಳಲಿವೆ.

ಪ್ರತಿಕ್ರಿಯಿಸಿ (+)