ಶುಕ್ರವಾರ, ಮೇ 7, 2021
24 °C
ಉಸ್ತುವಾರಿ ಸಚಿವೆ ಉಮಾಶ್ರೀ ಅವರಿಂದ ಉದ್ಘಾಟನೆ

`22ರಿಂದ ಮುಂಗಾರು ಸಾಂಸ್ಕೃತಿಕ ಹಬ್ಬ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಪ್ರತಿ ವರ್ಷದಂತೆ ಈ ವರ್ಷವೂ ಕಾರ ಹುಣ್ಣಿಮೆ ಅಂಗವಾಗಿ ಮುನ್ನೂರು ಕಾಪು ಸಮಾಜವು `ಮುಂಗಾರು ಸಾಂಸ್ಕೃತಿ ರಾಯಚೂರು ಹಬ್ಬ'ವನ್ನು ಜೂನ್ 22,23 ಹಾಗೂ 24ರಂದು ಆಚರಿಸುತ್ತಿದೆ ಎಂದು ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎ ಪಾಪಾರೆಡ್ಡಿ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೇಂದ್ರ ಗಂಜ್ ಬಯಲಿನಲ್ಲಿ ಭಾರವಾದ ಕಲ್ಲುಗಳನ್ನು ಎತ್ತುಗಳಿಂದ ಎಳೆಯುವ ಸ್ಪರ್ಧೆ ಜೂನ್ 22, 23 ಮತ್ತು 24ರಂದು ನಡೆಯಲಿದೆ. 22ರಂದು ಕರ್ನಾಟಕದ ಎತ್ತುಗಳಿಗೆ ಮಾತ್ರ ಒಂದುವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯುವುದು.23ರಂದು 2 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯು ಅಖಿಲ ಭಾರತ ಮುಕ್ತ ಅವಕಾಶ ಸ್ಪರ್ಧೆಯಾಗಿದೆ. 24ರಂದು ಎರಡುವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯೂ ಅಖಿಲ ಭಾರತ ಮುಕ್ತ ಅವಕಾಶ ಸ್ಪರ್ಧೆ ಇದೆ. ಕರ್ನಾಟಕದ ವಿವಿಧ ಭಾಗಗಳಿಂದ 15 ಜೋಡಿ, ಆಂಧ್ರಪ್ರದೇಶದ 35 ಜೋಡಿ ಎತ್ತುಗಳು ಸೇರಿದಂತೆ ಇತರೆ ಭಾಗಗಳಿಂದ ಎತ್ತುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಜೂನ್ 22ರಿಂದ 24ರವರೆಗೆ ಪ್ರತಿದಿನ ಬೆಳಿಗ್ಗೆ 8ಕ್ಕೆ ಸ್ಪರ್ಧೆ ನಡೆಯಲಿವೆ ಎಂದರು.ಆಕರ್ಷಕ ನಗದು ಬಹುಮಾನ: ಒಂದುವರೆ ಟನ್ ಭಾರ ಕಲ್ಲು ಎಳೆಯುವ ಸ್ಪರ್ಧೆ ಪ್ರಥಮ ಬಹುಮಾನ ನಗದು 45,000, ದ್ವಿತೀಯ ಬಹುಮಾನ 35,000, ತೃತೀಯ ಬಹುಮಾನ 25,000, ನಾಲ್ಕನೇ ಬಹುಮಾನ 15,000, 5ನೇ ಬಹುಮಾನ 10,000 ನೀಡಲಾಗುತ್ತಿದೆ ಎಂದರು.ಎರಡುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಪ್ರಥಮ ಬಹುಮಾನ 60,000, ದ್ವತೀಯ ಬಹುಮಾನ 45,000, ತೃತೀಯ ಬಹುಮಾನ 35,000, 4ನೇ ಬಹುಮಾನ 25,000, 5ನೇ ಬಹುಮಾನ 20,000, 6ನೇ ಬಹುಮಾನ 10,000 ನೀಡಲಾಗುತ್ತಿದೆ ಎಂದು ತಿಳಿಸಿದರು.24ರಂದು ನಡೆಯುವ ಎರಡುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯ ಪ್ರಥಮ ಬಹುಮಾನ 70,000, ದ್ವಿತೀಯ ಬಹುಮಾನ 55,000, ತೃತೀಯ ಬಹುಮಾನ 45,000, 4ನೇ ಬಹುಮಾನ 35,000, 5ನೇ ಬಹುಮಾನ 25,000 ಹಾಗೂ 6ನೇ ಬಹುಮಾನ 15,000 ನೀಡಲಾಗುತ್ತದೆ ಎಂದು ವಿವರಿಸಿದರು.ಪ್ರೋತ್ಸಾಹ ಧನ: ರಾಯಚೂರು ನಗರ ಹೊರತುಪಡಿಸಿ ಇತರೆ ಜಿಲ್ಲೆಗಳಿಂದ ಬಂದು ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿದ ಎತ್ತುಗಳ ಜೋಡಿ ಬಿಟ್ಟು ಉಳಿದಂತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಎತ್ತುಗಳ ಜೋಡಿಗೆ  ಪ್ರೋತ್ಸಾಹ ಧನವಾಗಿ 4,000 ನೀಡಲಾಗುತ್ತಿದೆ ಎಂದು ಹೇಳಿದರು.ಜೂನ್ 22,23 ಮತ್ತು 24ರಂದು ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದ ಮಹಿಳಾ ಸಮಾಜ ಆವರಣದಲ್ಲಿ ಸಂಜೆ 6 ಗಂಟೆಗೆ ನಡೆಯಲಿವೆ. ಕರ್ನಾಟಕ, ಆಂಧ್ರಪ್ರದೇಶ, ಛತ್ತೀಸಗಡ ಸೇರಿದಂತೆ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ.ಜೂನ್ 24ರಂದು ಸಂಜೆ 5ಕ್ಕೆ ರಾಜೇಂದ್ರ ಗಂಜ್ ಆವರಣದಲ್ಲಿ ಕುಸ್ತಿ ಬಲ ಪ್ರದರ್ಶನ ಸ್ಪರ್ಧೆ ನಡೆಯಲಿದೆ. ಆಂಧ್ರ, ಪಂಜಾಬ್, ಕರ್ನಾಟಕ, ದೆಹಲಿ ಪೈಲ್ವಾನರು ಭಾಗವಹಿಸುವರು. ಮಹಿಳಾ ಕುಸ್ತಿ ಸ್ಪರ್ಧೆಯು ನಡೆಯಲಿದೆ. ಅದೇ ದಿನ ಮಧ್ಯಾಹ್ನ 3ಕ್ಕೆ ಮುನ್ನೂರು ಕಾಪು ಸಮಾಜದ ಕುಲದೇವತೆ ಲಕ್ಷ್ಮಮ್ಮ ದೇವಸ್ಥಾನ ಮುಂದೆ ಕಲ್ಲು ಗುಂಡು, ಉಸುಕಿನ ಚೀಲ ಎತ್ತುವ ಸ್ಪರ್ಧೆ ನಡೆಯುವುದು ಎಂದು ವಿವರಿಸಿದರು.ಜೂನ್ 23ರಂದು ಸಂಜೆ ಕಾರಹುಣ್ಣಿಮೆ ವಿಶೇಷವಾಗಿ ಎತ್ತುಗಳ ಮೆರವಣಿಗೆ ನಡೆಯಲಿದೆ. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ನಗರಸಭೆ, ಹಟ್ಟಿ ಚಿನ್ನದ ಗಣಿ, ಕರ್ನಾಟಕ ವಿದ್ಯುತ್ ನಿಗಮ ಹಾಗೂ ಎಪಿಎಂಸಿಯಿಂದ ಒಟ್ಟು 10 ಲಕ್ಷ ಈ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ದೊರಕುವ ನಿರೀಕ್ಷೆ ಇದೆ. ಮುನ್ನೂರು ಕಾಪು ಸಮಾಜ ಬಾಂಧವರು 25 ಲಕ್ಷ ಹಣ ಕೊಡುತ್ತಿದ್ದು, 35 ಲಕ್ಷ ಮೊತ್ತದಲ್ಲಿ ಈ ಹಬ್ಬ ಆಚರಿಸಲಾಗುತ್ತಿದೆ ಎಂದು ಹೇಳಿದರು.22ರಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಉದ್ಘಾಟನೆ ನೆರವೇರಿಸುವರು.23ರಂದು ಸಚಿವರಾದ ಕೃಷ್ಣ ಭೈರೇಗೌಡ ಮತ್ತು ಶರಣಪ್ರಕಾಶ ಪಾಟೀಲ್, 24ರಂದು ಸಚಿವ ಸತೀಶ ಜಾರಕಿಹೊಳಿ, ಆಂಧ್ರಪ್ರದೇಶದ ಸಚಿವೆ ಬಿ.ಕೆ ಅರುಣಾ ಆಗಮಿಸಲಿದ್ದಾರೆ ಎಂದರು.ಮುನ್ನೂರು ಕಾಪು ಸಮಾಜ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಸಮಾಜದ ಮುಖಂಡರಾದ ಜಿ ಬಸವರಾಜರೆಡ್ಡಿ, ಪುಂಡ್ಲ ನರಸರೆಡ್ಡಿ, ನಿಂಬೆಕಾಯಿ ಶೇಖರರೆಡ್ಡಿ, ಯು ದೊಡ್ಡಮಲ್ಲೇಶಪ್ಪ, ಬಂಗಿ ನರಸರೆಡ್ಡಿ, ರಾಳ ತಿಮ್ಮಾರೆಡ್ಡಿ, ಬಿ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.