ಸೋಮವಾರ, ಅಕ್ಟೋಬರ್ 14, 2019
22 °C

22ರಿಂದ ಹೇಮಗಿರಿ ಜಾತ್ರೆ: ಸಿದ್ಧತೆಗೆ ಸಭೆ

Published:
Updated:

ಕೃಷ್ಣರಾಜಪೇಟೆ: ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ಕ್ಷೇತ್ರದ ವಾರ್ಷಿಕ ದನಗಳ ಜಾತ್ರೆ ಏರ್ಪಡಿಸುವ ಸಲುವಾಗಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ಬುಧವಾರ ನಡೆಯಿತು. ಸಭೆಯಲ್ಲಿ ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಮಾತನಾಡಿ, ಜ. 22ರಿಂದ ಫೆ.4ರವರಿಗೆ ಹೇಮಗಿರಿ ಜಾತ್ರೆ ನಡೆಯಲಿದೆ.ಜಾತ್ರೆಯಲ್ಲಿ ರಾಸುಗಳು ಮತ್ತು ಅವುಗಳ ಮಾಲೀಕರಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು  ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ರಾಸುಗಳು ಮತ್ತು ಅಂಗಡಿ ಮುಂಗಟ್ಟುಗಳು 22ಕ್ಕಿಂತ ಮುನ್ನ ಜಾತ್ರಾ ಮಾಳಕ್ಕೆ ಬರುವಂತಿಲ್ಲ ಎಂದರು.  ಇದಲ್ಲದೆ ತಾಲ್ಲೂಕಿನ ಮಾಕವಳ್ಳಿಯ ಕೋರಮಮಂಡಲ್ ಶುಗರ್ಸ್‌ನ ಸಹಕಾರದಲ್ಲಿ ತಾಲ್ಲೂಕು ಆಡಳಿತವು ಜಾತ್ರಾ ಮಹೋತ್ಸವದಲ್ಲಿ ಪ್ರಥಮ ಬಾರಿಗೆ ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಿದೆ. ಅರ್ಹರು ವಯಸ್ಸಿನ ಘೋಷಣೆ ಪತ್ರ, ವಾಸ ಸ್ಥಳದ ದೃಢೀಕರಣ ಸೇರಿ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಮುಖಂಡರಾದ ಲಕ್ಷ್ಮೇಗೌಡ, ವಿಶ್ವನಾಥ್, ಜಯರಾಮೇಗೌಡ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಟಿ.ಗಂಗಾಧರ್, ಬಂಡಿಹೊಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಶೇಷಾದ್ರಿ, ಉಪಾಧ್ಯಕ್ಷ ಮಂಜುನಾಥ್ ಇದ್ದರು.

 

Post Comments (+)