22 ಶಾಲೆಗೆ ಇ ಪಾಠಶಾಲಾ ಸೌಲಭ್ಯ

7

22 ಶಾಲೆಗೆ ಇ ಪಾಠಶಾಲಾ ಸೌಲಭ್ಯ

Published:
Updated:

ಮುಳಬಾಗಲು: ತಾಲ್ಲೂಕಿನ ಎಲ್ಲ 22 ಸರ್ಕಾರಿ ಪ್ರೌಢಶಾಲೆಗಳು ಹೊಸ ವರ್ಷದ ಮೊದಲ ತಿಂಗಳು ಕಳೆಯು­ವು­ದರೊಳಗೆ ಇ ಪಾಠಶಾಲಾ ಸೌಲಭ್ಯ­ವನ್ನು ಪಡೆಯಲಿವೆ. ಈ ಸೌಲಭ್ಯದಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಯೋಜನವಾಗಲಿರುವುದು ವಿಶೇಷ.ರೋಟರಿ ಮುಳಬಾಗಲು ಸೆಂಟ್ರಲ್ ಸಂಸ್ಥೆ ಮತ್ತು ರೋಟರಿ ಬೆಂಗಳೂರು ಪಶ್ಚಿಮ ಸಂಸ್ಥೆಯು ಜಂಟಿಯಾಗಿ ಹಮ್ಮಿಕೊಂಡಿರುವ ಯೋಜನೆಯಡಿ ನೀಡಲಾಗುವ ಸಲಕರಣೆಗಳಲ್ಲಿ ಸೌರ ವಿದ್ಯುತ್ ಲಾಂದ್ರಗಳೂ ಇರುವುದರಿಂದ ವಿದ್ಯಾರ್ಥಿಗಳು ಅದನ್ನು ತಮ್ಮ ಮನೆಗಳಲ್ಲಿ ವಿದ್ಯುತ್ ಪೂರೈಕೆ ಇಲ್ಲದ ವೇಳೆ ಬಳಸಿ ಅಧ್ಯಯನ ನಡೆಸಬಹುದು.ಒಟ್ಟು 80 ಸಾವಿರ ಮೌಲ್ಯದ ಸಾಮಗ್ರಿಗಳ ಗುಚ್ಛದಲ್ಲಿ,  ಹತ್ತನೇ ತರಗತಿ ಎಲ್ಲ ಪಠ್ಯವಿಷಯಗಳುಳ್ಳ ತಂತ್ರಾಂಶ­ವನ್ನು ಅಳವಡಿಸಿದ 1 ಲ್ಯಾಪ್ ಟಾಪ್, 1 ಯುಪಿಎಸ್, 22 ಇಂಚಿನ ಮಾನಿಟರ್, 32 ಸೌರ ವಿದ್ಯುತ್ ಲಾಂದ್ರಗಳು, ಫಲಕ, ಚಾರ್ಜಿಂಗ್ ಘಟಕವಿರುತ್ತದೆ.ಈ ಪ್ಯಾಕೇಜ್ ಅನ್ನು ಪಡೆಯಲು ಸ್ಥಳೀಯರು 10 ಸಾವಿರ ರೂಪಾಯಿ ದಾನ ನೀಡಬೇಕಷ್ಟೆ. ಅದನ್ನು ಪಡೆದು ರೋಟರಿ ಸಂಸ್ಥೆಯ ಸಾಮಗ್ರಿಗಳನ್ನು ನೀಡುತ್ತದೆ.ಜನವರಿ ತಿಂಗಳು ಮುಗಿಯುವುದ­ರೊಳಗೆ ತಾಲ್ಲೂಕಿನ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೂ ಈ ಸೌಲಭ್ಯವನ್ನು ನೀಡುವ ಉದ್ದೇಶವಿದೆ ಎನ್ನುತ್ತಾರೆ ರೋಟರಿ ಸಂಸ್ಥೆಯ ಪ್ರಮುಖರಾದ ರವೀಂದ್ರನಾಥ್.ತಾವು ಮುಳಬಾಗಲಿನವರೇ ಆಗಿದ್ದು, ನಂಗಲಿಯ ಶಾಲೆಯಲ್ಲಿ ಶಿಕ್ಷಕ­ರಾಗಿ ಕೆಲಸ ಮಾಡುತ್ತಿರುವು­ದ­ರಿಂದ ಮೊದಲಿಗೆ ತಾಲ್ಲೂಕಿನ ಪ್ರೌಢಶಾಲೆ­ಗಳಿಗೆ ಸೌಲಭ್ಯವನ್ನು ವಿತರಿಸಲು ನಿರ್ಧ­ರಿ­ಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಬಾಲಕಿಯರ ಶಾಲೆ: ಸಾಮಗ್ರಿ ವಿತ­ರಣೆಗೆ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶಾಸಕ ಜಿ.ಮಂಜುನಾಥ್ ಚಾಲನೆ ನೀಡಿದರು. ಸರ್ಕಾರಿ ಶಾಲೆಗಳ ಜೊತೆಗೆ ಅನು­ದಾನಿತ ಶಾಲೆಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು. ಅದಕ್ಕೆ ತಲಾ ₨ 10 ಸಾವಿರವನ್ನು ತಾವೇ ಭರಿಸುವು­ದಾ­ಗಿಯೂ ಅವರು ಭರವಸೆ ನೀಡಿದರು.ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಲಿಂಗಾರೆಡ್ಡಿ, ಜಿಲ್ಲಾ ಪಂಚಾಯತ್ ಸದಸ್ಯೆ ಇಂದಿರಾ, ರೋಟರಿ ಮುಳಬಾಗಲ್ ಸೆಂಟ್ರಲ್ ಅಧ್ಯಕ್ಷ ವಿ.ಆರ್.ಪ್ರಭಾಕರ ಗುಪ್ತಾ, ಬೆಂಗಳೂರು ಪಶ್ಚಿಮ ಸಂಸ್ಥೆಯ ಶಾಂತರಾವ್, ರೋಟರಿ ಜಿಲ್ಲಾ ಪಲ್ಸ್ ಪೊಲಿಯೋ ಅಧ್ಯಕ್ಷ ಎನ್.ರವೀಂದ್ರ­ನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ದೇವ­ರಾಜ್, ಉತ್ತನೂರು ಶ್ರೀನಿವಾಸ್, ಅಬ್ದುಲ್ ಬಷೀರ್, ಪ್ರಭಾಕರ್, ಜಗ­ನ್ಮೋಹನ ರೆಡ್ಡಿ, ಬಾಬು, ಪ್ರಾಂಶು­ಪಾಲರಾದ ಶೈಲಜಾ, ಉಪಪ್ರಾಂಶು­ಪಾಲರಾದ ಕೆ.ವಿ.ನರಸಿಂಹಯ್ಯ, ದೈಹಿಕ ಶಿಕ್ಷಣ ಶಿಕ್ಷಕ ಇ.ಶ್ರೀನಿವಾಸಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry