ಬುಧವಾರ, ಮೇ 12, 2021
19 °C

22, 23ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜೂ. 22 ಮತ್ತು 23 ರಂದು ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಹಾರಗದ್ದೆಯಲ್ಲಿ ಏಳನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ' ಎಂದು  ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಶ್ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತಿ ಡಾ.ಕೆ.ಆರ್. ಸಂಧ್ಯಾರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ. ಜೂ. 22 ರಂದು ಬೆಳಿಗ್ಗೆ 9 ಕ್ಕೆ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಕನ್ನಡ ಜಾಗೃತ ಮೆರವಣಿಗೆಗೆ ಶಾಸಕರಾದ ಎಂ.ಕೃಷ್ಣಪ್ಪ, ಬಿ.ಶಿವಣ್ಣ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. 20 ಕ್ಕೂ ಹೆಚ್ಚು ಕಲಾ ತಂಡಗಳು ಜನಪದ ಸೊಗಡನ್ನು ಬಿಂಬಿಸಲಿವೆ' ಎಂದರು.`ಸಮ್ಮೇಳನದಲ್ಲಿ ಬೆಂಗಳೂರು ಗಡಿಭಾಗದ ಐತಿಹಾಸಿಕ ಪರಂಪರೆ ಹಾಗೂ ಇತ್ತೀಚಿನ ಬೆಳವಣಿಗೆಗಳು, ಹನಿಗವನ ಗೋಷ್ಠಿ, ಸಮಕಾಲೀನ ಮಹಿಳೆ ಮತ್ತು ಸವಾಲುಗಳು, ಸಮ್ಮೇಳನಾಧ್ಯಕ್ಷರ  ಬದುಕು-ಬರಹ, ಕವಿಗೋಷ್ಠಿಗಳು ನಡೆಯಲಿವೆ. ಇವುಗಳಲ್ಲಿ ನಾಡು ನುಡಿಯ ಚಿಂತನೆಗೆ ಹೆಚ್ಚಿನ ಅವಕಾಶ ದೊರೆಯಲಿದೆ' ಎಂದರು.`ಸಮ್ಮೇಳನದಲ್ಲಿ ವಚನ ಗಾಯನ, ಜನಪದ ಗೀತ ಗಾಯನ, ಸುಗಮ ಸಂಗೀತ, ಗೀತ ಕುಂಚ, ನೃತ್ಯ ವೈವಿಧ್ಯ, ನಾಟಕ ಮತ್ತು ಗೀತ ಗಾಯನದಂತಹ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜೂ. 23 ರಂದು ಸಂಜೆ ಸಮ್ಮೇಳನದ ಸಮಾರೋಪ  ನಡೆಯಲಿದೆ' ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.