220ರೊಳಗೆ ಕಟ್ಟಿಹಾಕದ ನಿರಾಸೆಯಲ್ಲಿ ಬಿನ್ನಿ

7

220ರೊಳಗೆ ಕಟ್ಟಿಹಾಕದ ನಿರಾಸೆಯಲ್ಲಿ ಬಿನ್ನಿ

Published:
Updated:

ಹುಬ್ಬಳ್ಳಿ: `ನಮ್ಮ ಬೌಲಿಂಗ್ ಚೆನ್ನಾಗಿಯೇ ಇತ್ತು. ಅವರನ್ನು(ಹರಿಯಾಣ) 220 ರನ್ ಮೊತ್ತದೊಳಗೆ ಕಟ್ಟಿಹಾಕುವ ನಮ್ಮ ಪ್ರಯತ್ನ ಮಾತ್ರ ಈಡೇರಲಿಲ್ಲ ಎಂದು ಕರ್ನಾಟಕ ತಂಡದ ನಾಯಕ ಸ್ಟುವರ್ಟ್ ಬಿನ್ನಿ ನಿರಾಸೆ ವ್ಯಕ್ತಪಡಿಸಿದರು.`ಮೊದಲ ಎರಡು ಅವಧಿಯಲ್ಲಿ ನಾವೇ ಮುಂಚೂಣಿಯಲ್ಲಿದ್ದೇವು. ಆದರೆ ಕೊನೆಯ ಅವಧಿಯಲ್ಲಿ ಅಮಿತ್‌ಮಿಶ್ರಾ ಮತ್ತು ಜಯಂತ್ ಯಾದವ್ ತೋರಿದ ಪ್ರದರ್ಶನದಿಂದ ನಮ್ಮ ಯೋಜನೆ ಸಫಲವಾಗಲಿಲ್ಲ. ಭಾನುವಾರ ಬೆಳಿಗ್ಗೆಯ ಮೊದಲ ಅವಧಿಯಲ್ಲಿ ವಿಕೆಟ್ ಪಡೆದು ನಾವು ಬ್ಯಾಟಿಂಗ್ ಆರಂಭಿಸುವುದೇ ನಮ್ಮ ಗುರಿ' ಎಂದು ಹೇಳಿದರು.`ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಬೆಂಬಲ ನೀಡುವ ಪಿಚ್ ಇದು. ಬೌನ್ಸ್‌ರ್‌ಗಳ ಮೂಲಕವೇ ನಮ್ಮನ್ನು ವಿಚಲಿತಗೊಳಿಸುವ ಯೋಜನೆ ಕರ್ನಾಟಕ ಬೌಲರ್‌ಗಳದ್ದಾಗಿತ್ತು. ಆದರೆ ನಾವು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ಹರಿಯಾಣ ನಾಯಕ ಅಮಿತ್ ಮಿಶ್ರಾ ಹೆಮ್ಮೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry