ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ರಂದು ಅಖಿಲ ಭಾರತ ಶ್ವಾನ ಪ್ರದರ್ಶನ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮೈಸೂರು ಕೆನೆಲ್ ಕ್ಲಬ್ ವತಿಯಿಂದ ಜ.22ರಂದು ಬೆಳಿಗ್ಗೆ 9ಕ್ಕೆ ಅಖಿಲ ಭಾರತ ಶ್ವಾನಗಳ ಪ್ರದರ್ಶನ ಹೆಬ್ಬಾಳದ ಡೇರಿ ಕಾಲೇಜಿನ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ~ ಎಂದು ಕೆನೆಲ್ ಕ್ಲಬ್‌ನ ಪೋಷಕ ಡಾ.ಬಿ.ಸಿ.ರಾಮಕೃಷ್ಣ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಪ್ರದರ್ಶನದಲ್ಲಿ ದೇಶದ ಹಲವಾರು ರಾಜ್ಯಗಳಿಂದ ಸುಮಾರು 44 ವಿವಿಧ ತಳಿಗಳಿಗೆ ಸೇರಿದ 535 ಕ್ಕೂ ಹೆಚ್ಚು ಶೇಷ್ಠ ದರ್ಜೆಯ ಶ್ವಾನಗಳು ಭಾಗವಹಿಸುತ್ತಿವೆ~ ಎಂದರು.
 
`ವಿಶೇಷ ತಳಿಗಳಾದ ಡಾಗೋ ಕೆನಾರಿಯೋ, ಅಖಿತ, ಡಾಗ್-ಡಿ-ಬೋರ್‌ಡೇಕ್ಸ್, ಸಲೂಕಿ, ಸೈಬೀರಿಯನ್ ಹಸ್ಕಿಗಳೊಂದಿಗೆ ಜನಪ್ರಿಯ ತಳಿಗಳಾದ ಜರ್ಮನ್ ಶೆಫರ್ಡ್, ಡಾಬರ್ ಮ್ಯಾನ್, ಲೇಬ್ರಡಾರ್, ಗೋಲ್ಡನ್ ರಿಟ್ರೀವರ್, ಬಾಕ್ಸರ್, ಗ್ರೇಟ್ ಡೇನ್‌ಮತ್ತು ಮುಧೋಳ ತಳಿಯ ಶ್ವಾನಗಳು ವಿಶೇಷವಾಗಿ ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT