ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ರಿಂದ ಡಿಎಸ್‌ಎಸ್ ಅನಿರ್ದಿಷ್ಟ ಧರಣಿ

Last Updated 13 ಜನವರಿ 2011, 8:25 IST
ಅಕ್ಷರ ಗಾತ್ರ

ರಾಯಚೂರು:  ಅತ್ಯಂತ ಅಪಾಯಕಾರಿ ರಾಸಾ ಯನಿಕ ಸಿಎಚ್ ಪೌಡರ್ ಬಳಸಿ ಹೆಂಡವನ್ನು ತಯಾ ರಿಸಿ ಮಾರಾಟ ಮಾಡುತ್ತಿರುವ ತಾಲ್ಲೂಕಿನ ಕಡಂಗ ದೊಡ್ಡಿ ಗ್ರಾಮದ ಬಲರಾಮ ಮತ್ತು ಜಂಬನಗೌಡ ಎಂಬುವವರನ್ನು ಗಡಿಪಾರು ಮಾಡ ಬೇಕು ಎಂದು ಒತ್ತಾಯಿಸಿ ಇದೇ 22ರಂದು ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಅನಿರ್ದಿಷ್ಟ ಧರಣಿ ನಡೆಸ ಲಾಗು ತ್ತಿದೆ ಎಂದು ದಲಿತ ಸಂಘರ್ಷ ಸಮಿತಿ (ಎನ್‌ಮೂರ್ತಿ ಬಣ) ಜಿಲ್ಲಾಧ್ಯಕ್ಷ ರಾಮಾಂಜನೇಯಲು ಎಂದು ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಹೋದರರು ನಡೆಸುತ್ತಿರುವ ಹೆಂಡ ತಯಾರಿಕೆಯಂಥ ಅಕ್ರಮ ಚಟುವಟಿಕೆ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಯಲ್ಲಿ ಅನೇಕ ಮೊಕದ್ದಮೆ ದಾಖಲಾಗಿವೆ. ಗಡಿಪಾರಿಗೂ ಶಿಫಾರಸ್ಸು ಮಾಡಲಾಗಿದೆ. ಆದಾಗ್ಯೂ ನಿರಂತರವಾಗಿ ಇವರ ಅಕ್ರಮ ವ್ಯವಹಾರ ಮುಂದುವರಿದಿದೆ ಎಂದು ಆರೋಪಿಸಿದರು.

2009ರಲ್ಲಿಯೇ ಡಿಎಸ್ಪಿ ಟಿ.ಶ್ರೀಧರ ಅವರು ಸಹಾಯಕ ಆಯುಕ್ತರಿಗೆ ಪತ್ರ ಬರೆದು, ಜಂಬನಗೌಡ ಮತ್ತು ಬಲರಾಮ ಅವರನ್ನು ಗಡಿಪಾರು ಮಾಡಲು ಕೋರಿದ್ದರು. ಒಂದು ವರ್ಷ ಕಳೆದಿದ್ದರೂ ಸಹಾಯಕ ಆಯುಕ್ತರು ಈ ದಿಶೆಯಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆಪಾದಿಸಿದರು.ಸಿ.ಎಚ್ ಪೌಡರ್‌ನಿಂದ ತಯಾರಿಸಿದ ಹೆಂಡ ಕುಡಿದ ಕೂಲಿ ಕಾರ್ಮಿಕರು ಹಾಗೂ ಬಡ ಕುಟುಂಬಗಳು ಬೀದಿಪಾಲಾಗಿವೆ. ಕೂಡಲೇ ಜಿಲ್ಲಾಧಿ ಕಾರಿಗಳು ಇಂಥ ಆರೋಪಿಗಳನ್ನು ಗಡಿಪಾರು ಮಾಡ ಬೇಕು, ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಭಾರಿ ಮಟ್ಟದಲ್ಲಿ ಹೆಂಡ ತಯಾರಿಸಿ ಅಕ್ರಮ ಚಟುವಟಿಕೆ ಮಾಡುತ್ತಿರುವ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಇನ್ನುಳಿದವರಿಗೂ ಇದು ಎಚ್ಚರಿಕೆ ಆಗುತ್ತದೆ. ಕೂಡಲೇ ಕ್ರಮ ಕೈಗೊಳ್ಳಬೇಕು. ಗಡಿಪಾರು ಮಾಡುವವರೆಗೂ ಅನಿರ್ದಿಷ್ಟ ಧರಣಿ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.ಬಸವರಾಜ ತಳವಾರ, ಗೋವಿಂದರಾಜು ಹೊಸೂರು, ರಂಗಪ್ಪ ಶಕ್ತಿನಗರ, ಕೆ.ರವಿಕುಮಾರ, ಡಿ.ಕೃಷ್ಣಮೂರ್ತಿ, ಚಂದ್ರಶೇಖರ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT