23ಕ್ಕೆ ಉದ್ಯೋಗ ಮೇಳ

7

23ಕ್ಕೆ ಉದ್ಯೋಗ ಮೇಳ

Published:
Updated:

ತುಮಕೂರು: ನಗರದ ಉಪ್ಪಾರಹಳ್ಳಿ ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ಡಿ. 22ರಂದು ಬೆಳಿಗ್ಗೆ 9ರಿಂದ 4ರ ವರೆಗೆ ಉದ್ಯೋಗ ಮೇಳ ನಡೆಯಲಿದೆ ಎಂದು ಬೆಂಗಳೂರು ಕ್ರಿಯೇಟಿವ್ ಈವೆಂಟ್ಸ್ ಕಾರ್ಪೋರೇಷನ್ ಸಂಚಾಲಕ ಬಿ.ಎನ್.ನಾಗರಾಜು ತಿಳಿಸಿದರು.ರಾಜ್ಯದ 50ಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು ಲಭ್ಯವಾಗಲಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಸೇರಿದಂತೆ ಯಾವುದೇ ಪದವಿ ಹಾಗೂ ವಿದ್ಯಾರ್ಹತೆಯುಳ್ಳವರು ಮೇಳದಲ್ಲಿ ಭಾಗವಹಿಸಬಹುದು ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ವಿಪ್ರೊ, ಕಣ್ವ, ಎಚ್‌ಡಿಎಫ್‌ಸಿ, ಎಲ್‌ಐಸಿ, ಕಾರ್ ಮೊಬೈಲ್, ವೈಫ್ಲೆಕ್ಸ್ ಮುಂತಾದ ಕಂಪೆನಿಗಳು ಭಾಗವಹಿಸಲಿವೆ. ಟೆಕ್ನಿಕಲ್, ಎಂಜಿನಿಯರಿಂಗ್, ಮಾರುಕಟ್ಟೆ, ಆಪರೇಟಿಂಗ್ ಮುಂತಾದ ಉದ್ಯೋಗ ಅವಕಾಶಗಳು ದೊರೆಯಲಿವೆ. ಎಸ್‌ಎಸ್‌ಎಲ್‌ಸಿಯಿಂದ ಪದವಿ, ಎಂಬಿಎ, ಎಂಜಿನಿಯರಿಂಗ್ ಪದವೀಧರರು ಭಾಗವಹಿಸಬಹುದು ಎಂದು ಅವರು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ ಮೇಳ ಉದ್ಘಾಟಿಸುವರು. ಸಂಸ್ಥೆ ಅಧ್ಯಕ್ಷ ಲ್ಯಾನ್ಸಿ ಎಸ್.ಪಾಯ್ಸ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು. ಸಂಸ್ಥೆ ಕಾರ್ಯದರ್ಶಿ ಸುಜಯ್‌ಪಾಯ್ಸ ಇತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry