23ರಂದು ಬಿಜೆಪಿ ಹಿರಿಯ ನಾಗರಿಕರ ವೇದಿಕೆ ಸಭೆ

7

23ರಂದು ಬಿಜೆಪಿ ಹಿರಿಯ ನಾಗರಿಕರ ವೇದಿಕೆ ಸಭೆ

Published:
Updated:

ಬೆಂಗಳೂರು:  ಭಾರತೀಯ ಜನತಾ ಪಕ್ಷದ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು ಮತ್ತು ಪ್ರಮುಖರ ಸಭೆಯನ್ನು ಇದೇ 23ರಂದು ನಗರದಲ್ಲಿ ಕರೆಯಲಾಗಿದೆ ಎಂದು ವೇದಿಕೆಯ ಕಾರ್ಯಾಧ್ಯಕ್ಷ ಟಿ.ಗೋವಿಂದಪ್ಪ ಹೇಳಿದ್ದಾರೆ.ಸದನದಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸಿದ ಶಾಸಕರನ್ನು ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿರುವುದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿರುವುದು ಸೇರಿದಂತೆ ಏಳು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ವೇದಿಕೆಯ ರಾಜ್ಯ ಮಟ್ಟದ ಸಮಾವೇಶ, ಕಾರ್ಯಾಲಯ ಉದ್ಘಾಟನೆ, ಕೆಲ ಸಚಿವರ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ವೇದಿಕೆ ಎಲ್ಲ ಪದಾಧಿಕಾರಿಗಳು, ಪ್ರಮುಖರು ಸಭೆಗೆ ಹಾಜರಾಗಬೇಕು ಎಂದು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry