23ರಂದು ಯಲಬುರ್ಗಾ ಬಂದ್‌ಗೆ ತೀರ್ಮಾನ

7

23ರಂದು ಯಲಬುರ್ಗಾ ಬಂದ್‌ಗೆ ತೀರ್ಮಾನ

Published:
Updated:

ಯಲಬುರ್ಗಾ: ಲಿಂಗಾಯತ ಸಮಾಜಕ್ಕೆ ಸೇರಿದ ಸ್ವಾಮೀಜಿಗಳಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡುವುದನ್ನು ವಿರೋಧಿಸಿ ಇದೇ 23ರಂದು ಯಲಬುರ್ಗಾ ಬಂದ್ ಕರೆ ನೀಡಲಾಗಿದೆ ಎಂದು ವಿವಿಧ ಸಮಾಜದ ಮುಖಂಡರು ಹೇಳಿದ್ದಾರೆ.ಭಾನುವಾರ ಸಭೆ ಸೇರಿ ಈ ತೀರ್ಮಾನ ಕೈಗೊಳ್ಳಲಾಗಿದೆ, ಬಂದ್ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಚಲವಾದಿ ಸಮಾಜದ ಬಾಲರಾಜ ಮಂಗಳೂರ, ಡಿ.ಕೆ. ಪರುಶುರಾಮ, ಮಾದರ ಸಮಾಜದ ಹುಲಗಪ್ಪ ಬೇವೂರ, ವಸಂತ ಭಾವಿಮನಿ ಬಂಜಾರ ಸಮಾಜದ ಟೋಪ್ಪಣ್ಣ ನಾಯಕ ಹಾಗೂ ಇತರರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry