ಭಾನುವಾರ, ನವೆಂಬರ್ 17, 2019
28 °C

23ರಿಂದ ಸೋನಿಯಾ ಪ್ರಚಾರ

Published:
Updated:

strong>ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಇದೇ 23ರಿಂದ ತಲಾ ಮೂರು ದಿನಗಳ ಕಾಲ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡು ಕಾಂಗ್ರೆಸ್ ಪರ ಮತ ಯಾಚಿಸಲಿದ್ದಾರೆ. ಪ್ರಧಾನಿ ಡಾ.ಮನಮೋಹನ್ ಸಿಂಗ್ ಇದೇ 29ರಂದು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವರು.ಸೋನಿಯಾ, ರಾಹುಲ್, ಪ್ರಧಾನಿ ಸೇರಿದಂತೆ ಕೇಂದ್ರದ 20ಕ್ಕೂ ಹೆಚ್ಚು ಪ್ರಮುಖರು ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಕೆಪಿಸಿಸಿ ಮುಖಂಡರು ಕಳುಹಿಸಿದ್ದ ತಾರಾ ಪ್ರಚಾರಕರ ಪಟ್ಟಿಯನ್ನು ಅನುಮೋದಿಸಿರುವ ಎಐಸಿಸಿ, ಪಕ್ಷದ ಜನಪ್ರಿಯ ನಾಯಕರನ್ನು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ನಿಯೋಜಿಸಿದೆ.ಸೋನಿಯಾ ಗಾಂಧಿ ದಿನವೊಂದಕ್ಕೆ ಎರಡು ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಾರೆ. ಮೂರು ದಿನಗಳಲ್ಲಿ ಆರು ಜಿಲ್ಲೆಗಳಲ್ಲಿ ಅವರು ಪ್ರಚಾರ ಮಾಡುತ್ತಾರೆ.

ಪ್ರತಿಕ್ರಿಯಿಸಿ (+)