ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23 ವರ್ಷಗಳ ನಂತರ ಬಂದ ಪಕ್ಷಿ!

Last Updated 10 ಜೂನ್ 2011, 7:30 IST
ಅಕ್ಷರ ಗಾತ್ರ

ಕಾರವಾರ: ಜೋಯಿಡಾ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ 23 ವರ್ಷಗಳ ನಂತರ ವಯನಾಡ್ ಲಾಫಿಂಗ್ ಥ್ರಶ್ ಎಂಬ ಹೆಸರಿನ ಪಕ್ಷಿ ಕಂಡುಬಂದಿದೆ ಎಂದು ಎಂದು ಜಿಲ್ಲಾ ಪಂಚಾಯಿತಿ ಸಿಇಓ ವಿಜಯ ಮೋಹನ ರಾಜ್ ತಿಳಿಸಿದ್ದಾರೆ.

ಖ್ಯಾತ ಪಕ್ಷಿತಜ್ಞ ಡಾ.ರಂಜೀತ್ ಡ್ಯಾನಿಯಲ್ ಅವರು 1988ರಲ್ಲಿ ಕ್ಯಾಸಲ್‌ರಾಕ್ ಅರಣ್ಯದಲ್ಲಿ ಈ ಪಕ್ಷಿಯನ್ನು ಗುರುತಿಸಿದ್ದರು. ನಂತರ ಕಾಣೆಯಾಗಿದ್ದ ಈ ಪಕ್ಷಿ ಪ್ರಭೇದವನ್ನು ಗೋವಾದ ಪ್ರಸನ್ನ ಪರಬ ಎಂಬುವರು  ಜೋಯಿಡಾದ ಡಿಗ್ಗಿ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಗುರುತಿಸಿದಾರೆ.

ಎರಡು ದಶಕಗಳ ನಂತರ ಕಂಡುಬಂದ ಈ ಪಕ್ಷಿಯ ಇರುವಿಕೆ ಈ ಅರಣ್ಯ ಪ್ರದೇಶದ ಪಕ್ಷಿ ವೈವಿಧ್ಯತೆಯ ಮಹತ್ವವನ್ನು ಎತ್ತಿ ಹಿಡಿದಿದೆ. ಲಾಫಿಂಗ್ ಥ್ರಶ್ ಕುಟುಂಬಕ್ಕೆ ಸೇರಿದ ಈ ಪಕ್ಷಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

`ಮಲಯನ್ ನೈಟ್ ಹೆರೊನ್~, `ನೀಲಗಿರಿ ವುಡ್ ಪಿಜನ್~ ನಂತಹ ವಿರಳ ಪಕ್ಷಿಗಳನ್ನು ಪ್ರಸನ್ನ ಪರಬ ಜೋಯಿಡಾ ಅರಣ್ಯದಲ್ಲಿ ಗುರುತಿಸಿದ್ದಾರೆ. ಈ ಪ್ರದೇಶವು ದಾಂಡೇಲಿ- ಅಣಶಿ ಹುಲಿ ಸಂರಕ್ಷಿತ ಯೋಜನೆ ವ್ಯಾಪ್ತಿಗೆ ಹಾಗೂ ಗೋವಾದ ಮೋಲೆಮ್ ಅಭ ಯಾರಣ್ಯಕ್ಕೆ ಹೊಂದಿಕೊಂಡಿದ್ದು `ಮಲಬಾರ್ ಟ್ರೆಗೋನ್~, `ಗ್ರೇಹೆಡೆಡ್ ಬುಲ್ ಬುಲ್~, `ರೂಬಿಥ್ರೋಟೆಡ್  ಬುಲ್ ಬುಲ್~ ಪಕ್ಷಿಗಳು ಈ ಪ್ರದೇಶ ದಲ್ಲಿ ಮಾತ್ರ ಕಂಡು ಬರುತ್ತವೆ ಎನ್ನುತ್ತಾರೆ ವಿಜಯ ಮೋಹನರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT