2300ಕ್ಕೂ ಅಧಿಕ ವಿಧವೆಯರಿಂದ ಕುದ್ರೋಳಿಯಲ್ಲಿ ಪೂಜೆ

7

2300ಕ್ಕೂ ಅಧಿಕ ವಿಧವೆಯರಿಂದ ಕುದ್ರೋಳಿಯಲ್ಲಿ ಪೂಜೆ

Published:
Updated:

 

 

ಮಂಗಳೂರು: ಗಂಡನನ್ನು ಕಳೆದುಕೊಂಡ ಮಹಿಳೆ `ಅಮಂಗಳ~ ಎಂಬ ಭಾವವನ್ನು ತೊಡೆದು ಹಾಕುವ ಸಲುವಾಗಿ ಇಲ್ಲಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಸೋಮವಾರ ವಿಧವೆಯರಿಂದಲೇ ಚಂಡಿಕಾ ಹೋಮ, ಶಿವನಿಗೆ ಆರತಿ, ಬೆಳ್ಳಿ ರಥ ಎಳೆಯುವ ಐತಿಹಾಸಿಕ ಕಾರ್ಯಕ್ರಮ ನಡೆಯಿತು.ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಅಂದರೆ 2,300ರಷ್ಟು ವಿಧವೆಯರು ಪಾಲ್ಗೊಂಡಿದ್ದರು. ಅವರಿಗೆ ಪ್ರಸಾದ ರೂಪವಾಗಿ ಸೀರೆ, ರವಿಕೆ, ಕುಂಕುಮ, ಬಳೆ, ಹೂ ನೀಡಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry