ಶುಕ್ರವಾರ, ಜೂನ್ 18, 2021
28 °C

237 ನೇಕಾರರಿಗೆ ಹಕ್ಕುಪತ್ರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ರಾಜ್ಯದ 3,572 ನೇಕಾರ ಫಲಾನು­ಭವಿಗಳ ಮನೆ ನೋಂದಣಿಯ ` 13 ಕೋಟಿ ಮುದ್ರಾಂಕ ಶುಲ್ಕದ ಪಾವತಿಗೆ ರಾಜ್ಯ ಸರ್ಕಾರ ವಿನಾಯ್ತಿ ನೀಡಿದೆ ಎಂದು ಸಚಿವ ಎಚ್.ಕೆ.ಪಾಟೀಲ ನುಡಿದರು.ನಗರದ ಹೊರವಲಯದ ನರಸಾಪುರದಲ್ಲಿ  ಮಂಗಳ­ವಾರ  ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಸಮಾರಂಭದಲ್ಲಿ  237 ನೇಕಾರ ಫಲಾನುಭವಿಗಳಿಗೆ ಮನೆಯ ಹಕ್ಕು ಪತ್ರ ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಡಚ್ ನೆರವಿನಿಂದ ನಿರ್ಮಾಣಗೊಂಡಿದ್ದ 1942 ಹಾಗೂ ಇತರ ಯೋಜನೆಗಳಡಿ ನಿರ್ಮಾಣಗೊಂಡಿದ್ದ 1630 ಮನೆಗಳನ್ನು  ಮುದ್ರಾಂಕ ಶುಲ್ಕ ಭಾರದಿಂದಾಗಿ  ನೋಂದಣಿ ಮಾಡಿಕೊಂಡಿರಲಿಲ್ಲ.ಈಗ ರಾಜ್ಯ ಸರ್ಕಾರದ ಮುದ್ರಾಂಕ ಶುಲ್ಕ ವಿನಾಯ್ತಿ ಕೊಡುಗೆ­ಯಿಂದ ಈ ಮನೆಗಳನ್ನು ಕೇವಲ ` 1200 ವೆಚ್ಚ ಮಾಡಿ ತಮ್ಮ ಹೆಸರಿನಲ್ಲಿ ನೋಂದಣಿ ಮಾಡಿಕೊಳ್ಳಲು ಅನುಕೂಲ ಕಲ್ಪಿಸಿದೆ ಎಂದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎನ್. ಎಸ್.­ಪ್ರಸನ್ನಕುಮಾರ,  ಮಾಜಿ ಶಾಸಕ ಡಿ.ಆರ್‌. ಪಾಟೀಲ, ಕೆ.ಎಚ್.ಡಿಸಿ. ಹಿರಿಯ ಅಧಿಕಾರಿಗಳು ಹಾಜರಿದ್ದರು.ಬಳಿಕ ಸಚಿವ ಎಚ್.ಕೆ.ಪಾಟೀಲ ಅವರು ಕಣಗಿನಾಳ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದರು. ಹಾತಲಗೇರಿ ನಾಕಾದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ` 1.50 ಕೋಟಿ ವೆಚ್ಚದ 9 ಕಾಮಗಾರಿಗಳಿಗೆ ಚಾಲನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.