24 ಐಎಎಸ್, 22 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬುಧವಾರ, ಜೂಲೈ 17, 2019
30 °C

24 ಐಎಎಸ್, 22 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Published:
Updated:

ಬೆಂಗಳೂರು: ಹೊಸ ಸರ್ಕಾರ ರಚನೆಯಾದ ನಂತರ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 24 ಮಂದಿ ಐಎಎಸ್ ಮತ್ತು 22 ಮಂದಿ ಐಪಿಎಸ್ ಅಧಿಕಾರಿಗಳನ್ನು ಗುರುವಾರ ಸಂಜೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.ಐಎಎಸ್ ಅಧಿಕಾರಿಗಳು: ಕೌಶಿಕ್ ಮುಖರ್ಜಿ (ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ), ವಿ.ಉಮೇಶ (ಅಭಿವೃದ್ಧಿ ಆಯುಕ್ತರು), ಎಸ್.ಕೆ.ಪಟ್ನಾಯಕ್ (ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ), ಡಾ.ಎಚ್.ಭಾಸ್ಕರ್ (ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ), ಪರಮೇಶ್ ಪಾಂಡೆ (ಪ್ರಧಾನ ಕಾರ್ಯದರ್ಶಿ, ಡಿಪಿಎಆರ್-ಜನಸ್ಪಂದನ), ಡಾ.ಅಮಿತಾ ಪ್ರಸಾದ್ (ಪ್ರಧಾನ ಕಾರ್ಯದರ್ಶಿ, ಇಂಧನ), ರಾಜೀವ್ ಚಾವ್ಲಾ (ವ್ಯವಸ್ಥಾಪಕ ನಿರ್ದೇಶಕರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ).ಪಿ.ಎನ್.ಶ್ರೀನಿವಾಸಾಚಾರಿ (ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ. ಬಿಡಿಎ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ), ಡಾ.ಶಾಲಿನಿ ರಜನೀಶ್ (ಮಹಾನಿರ್ದೇಶಕಿ, ಆಡಳಿತ ತರಬೇತಿ ಸಂಸ್ಥೆ, ಮೈಸೂರು), ಡಾ.ಎನ್.ನಾಗಾಂಬಿಕಾ ದೇವಿ (ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ), ಎಸ್.ಆರ್.ಉಮಾಶಂಕರ್ (ಕಾರ್ಯದರ್ಶಿ- ವೆಚ್ಚ, ಹಣಕಾಸು ಇಲಾಖೆ), ಎಂ.ಬಿ.ದ್ಯಾಬೇರಿ (ಕಾರ್ಯದರ್ಶಿ, ಕಾರ್ಮಿಕ ಇಲಾಖೆ), ಎಂ.ಎಸ್.ರವಿಶಂಕರ್ (ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ), ಟಿ.ಕೆ.ಅನಿಲ್ ಕುಮಾರ್ (ಕಾರ್ಯದರ್ಶಿ, ಪೌರಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳು), ಮೊಹಮದ್ ಮೊಹಸಿನ್ (ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ), ಕೆ.ಅಮರನಾರಾಯಣ (ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ).ಡಾ.ಸಿ.ಸೋಮಶೇಖರ (ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ, ಬೆಂಗಳೂರು), ಕೆ.ಆರ್.ನಿರಂಜನ (ಆಯುಕ್ತರು, ಉದ್ಯೋಗ ಮತ್ತು ತರಬೇತಿ), ಪಿ.ಮಣಿವಣ್ಣನ್ (ಮುಖ್ಯ ಯೋಜನಾಧಿಕಾರಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್), ಪಿ.ಎಸ್.ವಸ್ತ್ರದ (ನಿರ್ದೇಶಕರು, ಕೃಷಿ ಮಾರುಕಟ್ಟೆ, ಹೆಚ್ಚುವರಿಯಾಗಿ ಪ್ರಾಚ್ಯವಸ್ತು, ಪುರಾತತ್ವ ಇಲಾಖೆಯ ಆಯುಕ್ತರ ಹೊಣೆ), ಚಕ್ರವರ್ತಿ ಮೋಹನ್ (ಸಿ.ಇ.ಓ, ಕೆ.ಐ.ಎ.ಡಿ.ಬಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ).

ಪಂಕಜ ಕುಮಾರ್ ಪಾಂಡೆ (ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ), ಎಸ್.ಶಂಕರನಾರಾಯಣ (ವಿಶೇಷ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ), ತುಳಸಿ ಮುದ್ದಿನೇನಿ (ಸಿ.ಇ.ಓ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ).ಐಪಿಎಸ್ ಅಧಿಕಾರಿಗಳು: ಪಿ.ಕೆ.ಗರ್ಗ್ (ಎಡಿಜಿಪಿ, ಸಿಐಡಿ ಆರ್ಥಿಕ ಅಪರಾಧಗಳು), ಡಿ.ರೂಪಾ (ಎಸ್ಪಿ, ಸಿಐಡಿಯ ಸೈಬರ್ ವಿಭಾಗ) ಎಚ್.ಎಸ್.ವೆಂಕಟೇಶ್ (ಎಸ್ಪಿ, ಗುಪ್ತದಳ, ಬೆಂಗಳೂರು), ಟಿ.ಜಿ.ಕೃಷ್ಣಭಟ್ (ಎಸ್ಪಿ, ಸಿಐಡಿ, ಪಿ.ಪಿ.ಮಧುಕರ್ (ಡಿಸಿಪಿ - ಆಡಳಿತ, ಬೆಂಗಳೂರು ನಗರ), ಎನ್.ಸತೀಶ್ ಕುಮಾರ್ (ಸಹಾಯಕ ಐಜಿಪಿ- ಸಾಮಾನ್ಯ, ಬೆಂಗಳೂರು), ಕೆ.ಪಿ.ಪುಟ್ಟಸ್ವಾಮಿ (ಎಸ್ಪಿ, ಸಿಐಡಿ), ಡಿ.ಪ್ರಕಾಶ್ (ಎಸ್ಪಿ, ದಾವಣಗೆರೆ), ಎಂ.ಎನ್.ನಾಗರಾಜ್ (ಸಹಾಯಕ ಐಜಿಪಿ - ಅಪರಾಧ, ಬೆಂಗಳೂರು), ಸಂದೀಪ್ ಪಾಟೀಲ  (ಡಿಸಿಪಿ, ಬೆಂಗಳೂರು ಉತ್ತರ), ಡಾ.ಪಿ.ಎಸ್.ಹರ್ಷ (ಡಿಸಿಪಿ, ಬೆಂಗಳೂರು ಪೂರ್ವ), ಲಭುರಾಮ್ (ಡಿಸಿಪಿ- ಅಪರಾಧ, ಬೆಂಗಳೂರು ನಗರ).ಡಾ.ಟಿ.ಡಿ.ಪವಾರ್ (ಡಿಸಿಪಿ, ಬೆಂಗಳೂರು ಈಶಾನ್ಯ), ಆರ್.ಎಚ್.ನಾಯಕ್ (ಎಸ್ಪಿ, ಚಿಕ್ಕಮಗಳೂರು), ಎಸ್.ಎನ್.ಸಿದ್ದರಾಮಪ್ಪ (ಎಸ್ಪಿ, ರೈಲ್ವೆ), ಡಾ.ಚಂದ್ರಗುಪ್ಪ (ಎಸ್ಪಿ, ಬೆಳಗಾವಿ), ಚೇತನ್ ಸಿಂಗ್ ರಾಥೋಡ್ (ಎಸ್ಪಿ, ಬಳ್ಳಾರಿ), ಎನ್.ಶಶಿಕುಮಾರ್ (ಎಸ್ಪಿ, ಹಾವೇರಿ), ಡಾ.ವೈ.ಎಸ್.ರವಿಕುಮಾರ್ (ಎಸ್ಪಿ, ಚಿತ್ರದುರ್ಗ), ಅಮಿತ್‌ಸಿಂಗ್ (ಎಸ್ಪಿ, ಗುಲ್ಬರ್ಗ), ಬಿ.ರಮೇಶ್ (ಎಸ್ಪಿ, ಬೆಂಗಳೂರು ಗ್ರಾಮಾಂತರ), ರವಿ ಡಿ.ಚನ್ನಣ್ಣವರ್ (ಎಸ್ಪಿ, ಹಾಸನ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry