2.4 ಕೋಟಿಯ ನೆಕ್‌ಲೇಸ್

7

2.4 ಕೋಟಿಯ ನೆಕ್‌ಲೇಸ್

Published:
Updated:

`ಗಂಜಾಂ~ ಆಭರಣಗಳು ಅನುಪಮ ಸೌಂದರ್ಯ, ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರುವಾಸಿ. ರಾಜ, ಮಹಾರಾಜರುಗಳಿಗೆ ಆಭರಣ, ಹರಳುಗಳನ್ನು ಪೂರೈಸುತ್ತಿದ್ದ ಗಂಜಾಂ ಕುಟುಂಬದ ಎಂಟನೇ ಪೀಳಿಗೆ ಪ್ರಸ್ತುತ ಈ ಪರಂಪರೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸುತ್ತಿದೆ.140 ವರ್ಷಗಳ ಇತಿಹಾಸದ ಗಂಜಾಂ ಬಸವನಗುಡಿ ಬುಲ್‌ಟೆಂಪಲ್ ರಸ್ತೆಯ ಗಂಜಾಂ ಮಂಟಪದಲ್ಲಿ ಶನಿವಾರ, ಭಾನುವಾರ ಆಯೋಜಿಸಿರುವ ಪ್ರದರ್ಶನದಲ್ಲಿ ಅನನ್ಯ ಮತ್ತು ಅಪರೂಪದ ಹರಳುಗಳು, ಡಿಸೈನ್‌ಗಳ ಆಭರಣಗಳನ್ನೆಲ್ಲ ನೋಡಬಹುದು. ಮನಸ್ಸಿಗೆ ಒಪ್ಪಿದರೆ ಖರೀದಿಸಲೂ ಬಹುದು.ಇಲ್ಲಿನ ಪ್ರತಿಯೊಂದು ಆಭರಣದ ಹಿಂದೆಯೂ ಅವಿಸ್ಮರಣೀಯ ಕಥೆಯಿದೆ, ಶ್ರದ್ಧೆ, ಸಾಧನೆ, ಕುತೂಹಲ ಇದೆ. ಇವುಗಳಲ್ಲಿ ಬಳಸಿದ ಹರಳುಗಳು, ಅವುಗಳಿಗಾಗಿ ನಡೆಸಿದ ಹುಡುಕಾಟ, ಅವುಗಳಿಗೆ ಆಭರಣ ರೂಪ ನೀಡುವಲ್ಲಿನ ಸೃಜನಶೀಲತೆ, ಕುಶಲಕರ್ಮಿಗಳ ಕುಸುರಿ ಮತ್ತು ಕಲಾ ನೈಪುಣ್ಯ ಹೀಗೆ ಎಲ್ಲವೂ ಹದವಾಗಿ ಮೇಳೈಸಿವೆ. ಸಮಕಾಲೀನ ಅದ್ಭುತ ಸೃಷ್ಟಿಗಳಿಂದಾಗಿ ಗಂಜಾಂ ಭಾರತೀಯ ಆಭರಣ ಇತಿಹಾಸ ಪರಂಪರೆಯಲ್ಲಿ ಪ್ರತ್ಯೇಕ ಸ್ಥಾನಗಳಿಸಿದೆ.ಇಲ್ಲಿನ ಪ್ರತಿಯೊಂದು ಆಭರಣವನ್ನೂ ಜೆಮ್ ರಿಸರ್ಚ್ ಸ್ವಿಸ್‌ಲ್ಯಾಬ್‌ನಲ್ಲಿ ಪ್ರಮಾಣಿಕರಿಸಲಾಗಿದೆ. ಬಹುತೇಕ  ಹರಳುಗಳಿಗೆ ಜರ್ಮನಿಯಲ್ಲಿ ಸಾಣೆ ಹಿಡಿಯಲಾಗಿದೆ.

ಅತ್ಯಂತ ಅಪೂರ್ವ ಮತ್ತು ಅತ್ಯುತ್ತಮವಾದ ಹರಳುಗಳನ್ನು ಹುಡುಕಿಕೊಂಡು ನಾವು ವಿಶ್ವ ವಿವಿಧೆಡೆ ಹೋಗುತ್ತೇವೆ. ಹೀಗಾಗಿಯೇ ಅತ್ಯುತ್ತಮ ವಜ್ರ ಮತ್ತು ಅಮೂಲ್ಯ ಹರಳುಗಳನ್ನು ಈ ಪ್ರದರ್ಶನದಲ್ಲಿ ನೋಡಬಹುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಗಂಜಾಂ ಹೇಳುತ್ತಾರೆ. ಚಿನ್ನ ಮತ್ತು ಪ್ಲಾಟಿನಂಗಳಲ್ಲಿ ತಯಾರಿಸಿದ ಸಂಗ್ರಹಗಳು ಪ್ರದರ್ಶನದಲ್ಲಿದೆರಿವರ್ ಡ್ಯಾನ್ಸ್, ಫೈರ್‌ಅಂಡ್, ಎಕ್ಸಾಟಿಕಾ, ಗರ್ಬೆರಾ, ಈಕಾಟ್ ಮುಂತಾದವು ಪ್ರದರ್ಶನದಲ್ಲಿ ಅನಾವರಣಗೊಂಡಿವೆ.ಸ್ಥಳ: ಗಂಜಾಂ ಮಂಟಪ, ಬುಲ್‌ಟೆಂಪಲ್ ರಸ್ತೆ, ಬಸವನಗುಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry