ಶುಕ್ರವಾರ, ಏಪ್ರಿಲ್ 16, 2021
31 °C

2.48 ಕೋಟಿ ಕ್ರಿಯಾ ಯೋಜನೆಗೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ಪುರಸಭೆ ವ್ಯಾಪ್ತಿಯಲ್ಲಿನ ವಿವಿಧ ವಾರ್ಡ್‌ಗಳು ಸೇರಿದಂತೆ ಇತರ ಪ್ರಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ತಯಾರಿಸಲಾದ ಕ್ರಿಯಾ ಯೋಜನೆಗೆ ಸರ್ವಸಮ್ಮತ ಒಪ್ಪಿಗೆ ಸೂಚಿಸಲಾಯಿತು.

ಶಹರಿ ಮಹಿಳಾ ರೋಜಗಾರ ಯೋಜನೆಯ ಕಚೇರಿಯಲ್ಲಿ ಮಂಗಳವಾರ ಪುರಸಭೆ ಅಧ್ಯಕ್ಷೆ ತಾಯಮ್ಮ ಚಂದಪ್ಪ ಅಕ್ಕರಿಕಿ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತ ಸಾಮಾನ್ಯ ಸಭೆಯಲ್ಲಿ ವಿವಿಧ ಕಾಮಗಾರಿಗಳ ಕುರಿತು ಕ್ರಿಯಾ ಯೋಜನೆಗೆ ಸರ್ವ ಸದಸ್ಯರು ಅನುಮೋದನೆ ನೀಡಿದರು.

ಆರೋಪ: ಪುರಸಭೆ ವತಿಯಿಂದ ಮಕ್ಕಳ ಪ್ರವಾಸಕ್ಕಾಗಿ ಖರ್ಚು ಮಾಡಲಾಗಿರುವ ಹಣ, ಕುಶಲಕರ್ಮಿಗಳಿಗೆ ಸಹಾಯ ಧನ ಮತ್ತು ಶೌಚಾಲಯ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ ಎಂದು ಉಪಾಧ್ಯಕ್ಷ ಲಕ್ಷ್ಮಣ ಗೋಸಲ ಅವರು ಆರೋಪಿಸಿದರು.

ಪಟ್ಟಣದ ಯಲ್ಲಾಲಿಂಗ ಕಾಲೊನಿಯಲ್ಲಿ ಬರುವ ಪುರಸಭೆಯ ಜಾಗೆಯಲ್ಲಿ ಕೆಲವು ದಿನಗಳಿಂದ ಯಾರ ಪರವಾನಗಿ ಇಲ್ಲದೆ ಆಕ್ರಮವಾಗಿ ಮನೆಗಳನ್ನು ಕಟ್ಟಿಕೊಳ್ಳುತ್ತಿರುವ ಬಗ್ಗೆ ಕಂಡು ಬಂದಿದ್ದು ಕೂಡಲೇ ತೆರವುಗೊಳಿಸಬೇಕೆಂದು ಉಪಾಧ್ಯಕ್ಷರು ಸಭೆಯಲ್ಲಿ ಸೂಚಿಸಿದರು.

ಸಭೆಯಲ್ಲಿ ಮುಖ್ಯಾಧಿಕಾರಿ ಶ್ರೀಪಾದ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಶರಣಪ್ಪ ಬಳೆ ಹಾಗೂ ಸದಸ್ಯರು, ಪುರಸಭೆಯ ಸಿಬ್ಬಂದಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.