ಭಾನುವಾರ, ಏಪ್ರಿಲ್ 18, 2021
24 °C

25ರಿಂದ ವಿಶ್ವಕರ್ಮ ವಿದ್ಯಾರ್ಥಿ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ತಾಲ್ಲೂಕಿನ ವರವಿಯಲ್ಲಿ ಮೌನೇಶ್ವರ ದೇವಸ್ಥಾನ ಅನ್ನಸಂತರ್ಪಣೆ ಮತ್ತು ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ 16ನೇ ರಾಜ್ಯಮಟ್ಟದ ವಿಶ್ವಕರ್ಮ ಬ್ರಾಹ್ಮಣ ವಿದ್ಯಾರ್ಥಿ ಶಿಬಿರವನ್ನು ಏ. 25ರಿಂದ ಮೇ 2ರ ವರೆಗೆ ಆಯೋಜಿಸಲಾಗಿದೆ.ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು 14ರಿಂದ 18 ವಯಸ್ಸಿನವರು ಆಗಿರಬೇಕು. ಕಡ್ಡಾಯವಾಗಿ ಉಪನಯನ ಮಾಡಿಸಿಕೊಂಡಿರಬೇಕು. ಒಂದು ವೇಳೆ ಉಪನಯನ ಆಗದೇ ಇದ್ದಲ್ಲಿ 26ರಂದು ನಡೆಯುವ ಉಪನಯನ ಕಾರ್ಯದಲ್ಲಿ ಭಾಗಿಯಾಗಿ ಉಪನಯನ ಮಾಡಿಸಿಕೊಂಡು ಶಿಬಿರದಲ್ಲಿ ಭಾಗವಹಿಸಲು ಸಿದ್ಧರಿರಬೇಕು.ಶಿಬಿರದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಯೋಗ, ಪ್ರಾಣಾಯಾಮ, ರಬ್ಬರ್ ಹಾಗೂ ಫೈಬರ್, ಮೋಲ್ಡ್ ತಯಾರಿಕೆ, ಮಣ್ಣಿನ ಹಾಗೂ ಪ್ಲಾಸ್ಟಿಕ್‌ನಿಂದ ಕಲಾಕೃತಿ ರಚನೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುವುದು.ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಗ್ರಾಫಿಕ್ಸ್, ಕುರಕುಶಲ ಕಲೆಗಳ ಬಗ್ಗೆ ಮಾರ್ಗದರ್ಶನ ಮಾಡಲಾಗುವುದು. ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಏ. 25ರ ಸಂಜೆ 6ರ ಒಳಗಾಗಿ ಶ್ರೀ ಕ್ಷೇತ್ರ ವರವಿಯಲ್ಲಿ ಹಾಜರಿದ್ದು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಎಸ್.ವಿ. ಕಮ್ಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.