25 ಅಡಿ ಶಿವಲಿಂಗ ದ್ವಾರ ಅನಾವರಣ

7

25 ಅಡಿ ಶಿವಲಿಂಗ ದ್ವಾರ ಅನಾವರಣ

Published:
Updated:

ಬೆಂಗಳೂರು:  ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯ ಶಿವ ದೇವಾಲಯದಲ್ಲಿ ಶಿವಲಿಂಗದ ಮೂಲಕ ಪ್ರವೇಶ ಪಡೆಯುವ 25 ಅಡಿ ಎತ್ತರದ ವಿನೂತನ `ಶಿವಲಿಂಗ ದ್ವಾರ~ವನ್ನು ಶನಿವಾರ ಅನಾವರಣಗೊಳಿಸಲಾಯಿತು.ಇದು ಬೆಂಗಳೂರಿನ ಅತಿ ಎತ್ತರದ ಶಿವಲಿಂಗ ಪ್ರವೇಶ ದ್ವಾರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ದೇವಸ್ಥಾನದ ಸಂಕೀರ್ಣಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಈ ಶಿವಲಿಂಗ ಪ್ರವೇಶ ದ್ವಾರ ಇದೀಗ ಭಕ್ತರನ್ನು ಸೆಳೆಯುತ್ತಿದೆ.ಈ ಶಿವ ದೇವಾಲಯವನ್ನು ನಿರ್ವಹಿಸುತ್ತಿರುವ ಆರ್‌ವಿಎಂ ಪ್ರತಿಷ್ಠಾನ ಶಿವರಾತ್ರಿ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲು ಸಿದ್ಧತೆ ನಡೆಸಿದೆ.  ಫೆ. 20ರಂದು ದೇವಸ್ಥಾನಕ್ಕೆ ಒಂದು ಲಕ್ಷ ಮಂದಿ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ. ಅಂದು ಬೆಳಿಗ್ಗೆ 6ರಿಂದ ಮರು ದಿನ ಮುಂಜಾನೆ 4 ಗಂಟೆವರೆಗೆ ದೇವಸ್ಥಾನದ ಬಾಗಿಲುಗಳನ್ನು ಭಕ್ತಾದಿಗಳ ಅನುಕೂಲಕ್ಕಾಗಿ ತೆರೆದಿರಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry