ಬುಧವಾರ, ನವೆಂಬರ್ 20, 2019
20 °C

25 ನಾಮಪತ್ರಗಳು ಹಿಂದಕ್ಕೆ

Published:
Updated:

ಬಳ್ಳಾರಿ: ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯಾದ್ಯಂತ ನಾಮಪತ್ರ ಸಲ್ಲಿಸಿದ್ದ 25 ಜನ ಶನಿವಾರ ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.ಇವರಲ್ಲಿ 24 ಜನರು ಪಕ್ಷೇತರ ರಾಗಿದ್ದು, ಒಬ್ಬರು ಆರ್‌ಎಸ್‌ಪಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ, ಒಟ್ಟು 10 ಜನ ಪಕ್ಷೇತರರು ನಾಮಪತ್ರ ವಾಪಸ್ ಪಡೆದಿದ್ದು, ಜಿಲ್ಲೆಯಾದ್ಯಂತದ ವಿವರ ಕೆಳಕಂಡಂತಿದೆ.ಬಳ್ಳಾರಿ ಗ್ರಾಮೀಣ: ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಅಂಜಿನಪ್ಪ, ವಿ.ಕೆ. ಬಸಪ್ಪ.ಬಳ್ಳಾರಿ ನಗರ: ಪಕ್ಷೇತರರಾಗಿ ನಾಮ ಪತ್ರ ಸಲ್ಲಿಸಿದ್ದ ಕೋನಂಕಿ ರಾಮಪ್ಪ.ಹೂವಿನ ಹಡಗಲಿ: ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಪುತ್ರಪ್ಪ ರಾಯಣ್ಣ, ಜಿ.ಬುಳ್ಳಪ್ಪ, ಶಿವಪ್ಪ, ಹಲಗಿ ಸುರೇಶ, ವಿ.ದೊಡ್ಡಮಾರೆಪ್ಪ.

ಹಗರಿಬೊಮ್ಮನಹಳ್ಳಿ: ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಆರ್.ಉಮೇಶ್, ಎಚ್.ಕೃಷ್ಣಾ ನಾಯ್ಕ, ಬಿ.ಗೂರ‌್ಯಾ ನಾಯ್ಕ, ತಗ್ಗಿನಕೆರೆ ಅರ್ಜುನಪ್ಪ, ಸಿ.ಮರಿಯಪ್ಪ, ಎರ‌್ರಿಸ್ವಾಮಿ, ಯು.ಸೀತಾ ನಾಯ್ಕ, ಸಂಪತ್‌ಕುಮಾರ್ ನಾಯ್ಕ, ವಿ.ಹನುಮಂತಪ್ಪ, ಎಚ್.ಹೇಮಲವ್ವ.ವಿಜಯನಗರ: ಆರ್‌ಎಸ್‌ಪಿಯ ಬಿ.ಗೌರಿ ಶಂಕರ್, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮಠದ ಮಲ್ಲಿಕಾರ್ಜುನ, ಕೆ.ಬಿ. ಶ್ರೀನಿವಾಸ್.

ಸಿರುಗುಪ್ಪ: ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಕೆ.ಎಸ್. ದಿವಾಕರ.ಸಂಡೂರು: ಪಕ್ಷೇತರ ಅಭ್ಯರ್ಥಿಗಳಾದ ಜಿ.ರಾಮಾಂಜಿನಿ.ಕೂಡ್ಲಿಗಿ: ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಟಿ.ರಾಮಪ್ಪ ಹಾಗೂ ಎಂ.ಎಸ್. ಹನುಮಂತಪ್ಪ.

ಪ್ರತಿಕ್ರಿಯಿಸಿ (+)