ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

252ಎಫ್ ಮಾರ್ಗದ ಅವಾಂತರ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಪೀಣ್ಯ ಮತ್ತು ಆಸುಪಾಸಿನ ಕಾರ್ಖಾನೆಗಳಲ್ಲಿ ಸಾವಿರಾರು ಕಾರ್ಮಿಕರು ಮಾರ್ಗ ಸಂಖ್ಯೆ 252ಎಫ್‌ನ್ನು ಅವಲಂಬಿಸಿದ್ದಾರೆ.

 ಬೆಳಿಗ್ಗೆ ಮತ್ತು ಸಂಜೆ ನಿಗದಿತ ವೇಳೆಯಲ್ಲಿ ನಿಗದಿತ ವೇಳೆಯಲ್ಲಿ ಬಸ್ ಬರುವುದಿಲ್ಲ. ಲಗ್ಗೆರೆ ಬಸ್ ನಿಲ್ದಾಣದಲ್ಲಿ ನಿಂತಿದ್ದರೆ ಹಿಂದೆ ಬರುವ 252ಎಫ್ ನಿಲ್ಲಿಸದೆ ಮುಂದೆ ಸಾಗುತ್ತದೆ. ಪೀಣ್ಯ 2ನೇ ಸ್ಟೇಜ್ ಹೋಗುವವರು ಹೇಗೆ ತಲುಪಬೇಕು?

ಕೆಲ ಸಲ 252ಎಫ್ 2 ಅಥವಾ 3 ವಾಹನವು ಒಟ್ಟಿಗೆ ಬರುತ್ತದೆ. ಎಲ್ಲರೂ ಪೈಪೋಟಿಗೆ ಬಿದ್ದವರಂತೆ ನಿಲ್ದಾಣಗಳಲ್ಲಿ ನಿಲ್ಲಿಸದೇ ಮುಂದೆ ಸಾಗುತ್ತಾರೆ. ಪ್ರಯಾಣಿಕರು  ಸ್ವಲ್ಪ ದೂರ ಬೆನ್ನಟ್ಟಿ ಅಸಹಾಯಕರಾಗಿ ಇನ್ನೊಂದು ಬಸ್‌ಗಾಗಿ ಕಾಯಬೇಕಾಗುತ್ತದೆ. 

ಸಾಯಂಕಾಲ 4 ರಿಂದ 5 ವಾಹನಗಳು ಸಾಲಾಗಿ ಪೀಣ್ಯ 2ನೇ ಸ್ಟೇಜ್‌ನಲ್ಲಿ ನಿಂತಿರುತ್ತವೆ. ಯಾವ ಬಸ್ ಹತ್ತಿದರೂ ಮತ್ತೊಂದು ಈ ಬಸ್ ಹೊರಡುವುದಿಲ್ಲ, ಮತ್ತೊಂದು ಬಸ್‌ಗೆ ಹೋಗಿ ಎಂದೇ ತೋರಿಸುತ್ತಾರೆ.  ಕೊನೆಗೆ ಯಾರೂ ಹೊರಡುವುದಿಲ್ಲ. ಎಲ್ಲರೂ ಹಾಳು ಹರಟೆಯಲ್ಲಿ ಮುಳುಗಿರುತ್ತಾರೆ.

ಕಾರ್ಮಿಕರಿಗೆ ಬೆಳಿಗ್ಗೆ 7 ರಿಂದ 9 ಮತ್ತು ಸಂಜೆ 5 ರಿಂದ 7 ರವರೆಗೆ ನಿಗದಿತ ವೇಳೆಯಲ್ಲಿ ಸಮರ್ಪಕವಾಗಿ ಬಸ್ ಓಡಿಸಲಿ. ನಿಲ್ದಾಣದಲ್ಲಿ ಮರೆಯದೆ ಕಡ್ಡಾಯವಾಗಿ ನಿಲ್ಲಿಸಲಿ.
ಸೌಜನ್ಯವಿರಲಿ:

  ಒಬ್ಬ ನಿರ್ವಾಹಕ ಬಸ್‌ನಲ್ಲಿದ್ದ ಹಿರೀಕರನ್ನು `ಸಾಯಲು ಬರುತ್ತೀರಾ~ ಎಂದು ಜರೆದರು. ಸೌಜನ್ಯದ ವರ್ತನೆಯನ್ನು ಬಸ್ ನಿರ್ವಾಹಕರಿಂದ ನಿರೀಕ್ಷಿಸಬಹುದೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT