ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಂದು ‘ಪರ್ಯಾಯ ಸಂಸ್ಕೃತಿ ವಚನ ಸಂಪುಟ’ ಬಿಡುಗಡೆ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಹನ್ನೆರಡನೇ ಶತಮಾನದ ಸಮಾಜದಲ್ಲಿದ್ದ ಅಸಮಾನತೆಯನ್ನು ಪೋಷಿಸುವ ಚಿಂತನೆಯನ್ನು ನಿರಾಕರಿಸಿ, ಪರ್ಯಾಯ ಸಂಸ್ಕೃತಿ ನಿರ್ಮಿಸಬೇಕೆಂಬ ವಚನಕಾರರ ಮೂಲ ಆಶಯವನ್ನು ಬಿಂಬಿಸುವ ವಚನಗಳನ್ನು ಒಳಗೊಂಡ ‘ಪರ್ಯಾಯ ಸಂಸ್ಕೃತಿ ವಚನ ಸಂಪುಟ’ ಡಿ. 25 ರ ಬುಧವಾರ ಧಾರವಾಡದಲ್ಲಿ ಬಿಡುಗಡೆಯಾಗಲಿದೆ.

ಸಾಹಿತಿ ಡಾ. ಸಿ. ವೀರಣ್ಣ ಅವರು ಸಂಪಾ­ದಕ­ರಾಗಿ ರೂಪಿಸಿರುವ ಈ ಸಂಪುಟವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.

ಕರ್ನಾಟಕ ವಿದ್ಯಾ­ವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆಯ ಲಿರುವ ಸಮಾರಂಭದಲ್ಲಿ ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರು ಸಂಪುಟ ವನ್ನು ಬಿಡುಗಡೆ ಮಾಡುವರು.

ರಂಜಾನ್ ದರ್ಗಾ ಕೃತಿ ಕುರಿತು ಮಾತ­ನಾಡಲಿದ್ದು ಗೊ.ರು. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು ಎಂದು ಶರಣ ಸಾಹಿತ್ಯ ಪರಿಷತ್ತಿನ ಪ್ರಕಟಣೆ      ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT