26ರಂದು ಚಾರಿಟಿ ಸಂತೆ

7

26ರಂದು ಚಾರಿಟಿ ಸಂತೆ

Published:
Updated:

ಬೆಂಗಳೂರು: ನಗರದ ಸ್ವಯಂಸೇವಾ ಸಂಸ್ಥೆ ‘ಕಮ್ಯುನಿಟಿ ಸರ್ವಿಸಸ್ ಆಫ್‌ ಬೆಂಗಳೂರು (ಸಿಎಸ್‌ಬಿ)’ ಆಶ್ರಯದಲ್ಲಿ  ‘ಚಾರಿಟಿ ಸಂತೆ’ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಇದೇ 26ರಂದು ಬೆಳಿಗ್ಗೆ 10.30ರಿಂದ ಸಂಜೆ 7 ಗಂಟೆ ವರೆಗೆ ನಡೆಯಲಿದೆ.ಸಂಸ್ಥೆಯ ಸದಸ್ಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು, ಮನೆ ಯಲ್ಲೇ ತಯಾರಿಸಿದ ಕೇಕ್‌, ಜಾಮ್‌ ಹಾಗೂ ವಿವಿಧ ಉಪ್ಪಿನಕಾಯಿಗಳ ಪ್ರದರ್ಶನ ನಡೆಯಲಿದೆ. ಮಹಿಳೆಯರು, ಯುವಜನರು ಹಾಗೂ ಸ್ವಯಂಸೇವಾ ಸಂಸ್ಥೆಗಳು ತಮ್ಮ ವಿಶೇಷ ಉತ್ಪನ್ನಗಳನ್ನು ನಗರದ ಜನತೆಗೆ ಪರಿಚಯಿಸಲು ಅವಕಾಶ ನೀಡಲಾಗುವುದು.ಬೆಳಿಗ್ಗೆ 10.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಕಲಾವಿದೆ ವಿಮಲಾ ರಂಗಾಚಾರ್‌, ಹಿರಿಯ ಲೇಖಕ ಡಿ.ಕೆ.ಚೌಟ, ಮಧು ನಟರಾಜ್‌, ಸುಶೀಲಾ ಮೆಹ್ತಾ ಭಾಗವಹಿಸುವರು.ಹೆಚ್ಚಿನ ಮಾಹಿತಿಗಾಗಿ ನಂದಿನಿ ನಾಗರಕಟ್ಟಿ nandini. nagarkatti@gmail.com ಮೊಬೈಲ್‌: 9980137532 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry