26ರಿಂದ ಲಾರಿ ಮುಷ್ಕರ

7

26ರಿಂದ ಲಾರಿ ಮುಷ್ಕರ

Published:
Updated:

ಬೆಂಗಳೂರು: `ಲಾರಿ ಮಾಲೀಕರಿಗೆ ವಿವಿಧ ಇಲಾಖೆಯ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ಮತ್ತು ದಂಡ ವಿಧಿಸುತ್ತಿರುವುದನ್ನು ಖಂಡಿಸಿ ಡಿ.26 ರಂದು ರಾಜ್ಯದಾದ್ಯಂತ ಅನಿರ್ದಿಷ್ಟಕಾಲ ಮುಷ್ಕರ ಮಾಡಲಾಗುವುದು' ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಹೇಳಿದರು.ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬೆಂಗಳೂರು ನಗರಕ್ಕೆ ಮತ್ತು ರಾಜ್ಯದ ಇತರೆ ನಗರಗಳಿಗೆ ಮರಳು ಸಾಗಾಣಿಕೆ ಮಾಡುತ್ತಿರುವ ಲಾರಿ ಮಾಲೀಕರಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ  ಮತ್ತು ಮನಸೋ ಇಚ್ಛೆ ದಂಡ ವಿಧಿಸಿ ಕ್ರಿಮಿನಲ್ ಪ್ರಕರಣ ಹೂಡುತ್ತಿದ್ದಾರೆ. ಇದನ್ನು ಖಂಡಿಸಿ ಮುಷ್ಕರ ಹೂಡುವುದು ಅನಿವಾರ್ಯವಾಗಿದೆ' ಎಂದರು.`ಸರ್ಕಾರವು ಮರಳು ಶೇಖರಣೆ ಮತ್ತು ವಿತರಣೆ ಮಾಡುವುದಕ್ಕೆ ಮರಳು ನೀತಿಯನ್ನು ಜಾರಿಗೆ ತಂದಿತ್ತು. ಹೊಸ ನೀತಿಯಂತೆ ಸರ್ಕಾರದ ಹೊರತಾಗಿ ಯಾವುದೇ ಖಾಸಗಿ ವ್ಯಕ್ತಿಗಳು ಮರಳು ಶೇಖರಣೆ ಮಾಡಿ ವಿತರಿಸುವುದನ್ನು ಕಾನೂನು ಬಾಹಿರ. ಈ ನೀತಿಯಿಂದ ಯಾವುದೇ ಕಿರುಕುಳಗಳಿಲ್ಲದೆ ಮರಳು ಲಭ್ಯವಾಗುತ್ತದೆ ಎಂದು ತಿಳಿದ ನಮ್ಮ ನಿರೀಕ್ಷೆಗಳು ಸುಳ್ಳಾಗಿವೆ' ಎಂದು ಹೇಳಿದರು.`ಸರ್ಕಾರದ ಅಧಿಕಾರಿಗಳು ಅಗತ್ಯವಿರುವ ಮರಳು ಶೇಖರಣೆ ಮಾಡಿ ವಿತರಿಸಲು ವಿಫಲರಾಗಿದ್ದಾರೆ. ಈಗಿರುವ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಶೇ 10 ರಷ್ಟು ಮರಳು ಪೂರೈಕೆಯಾಗುತ್ತಿದ್ದು, ಉಳಿದ ಶೇ 90 ಭಾಗ ಮರಳು ಖಾಸಗಿ ಮೂಲಗಳಿಂದಲೇ ಸಿಗುತ್ತಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry