26ರಿಂದ ವಿಶ್ವಜ್ಯೋತಿ ಯಾತ್ರೆ

7

26ರಿಂದ ವಿಶ್ವಜ್ಯೋತಿ ಯಾತ್ರೆ

Published:
Updated:

ಗುಲ್ಬರ್ಗ: ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕೃತಿ ತುಂಬುವುದಕ್ಕಾಗಿ ವಿಶ್ವಜ್ಯೋತಿ ಪ್ರತಿಷ್ಠಾನವು ಡಿ.26ರಿಂದ ಯಾದಗಿರಿ ಜಿಲ್ಲೆಯ ತಾಲ್ಲೂಕುಗಳಲ್ಲಿ `ಶರಣ ಕಿರಣ ಸಾರುವುದಕ್ಕೆ ವಿಶ್ವಜ್ಯೋತಿ ಯಾತ್ರೆ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಭಾನುವಾರ ಇಲ್ಲಿ ಹೇಳಿದರು. ಗುಲ್ಬರ್ಗ ಜಿಲ್ಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ಯಶಸ್ವಿಯ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿಯೂ ಶರಣ ಕಿರಣ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಡಿ. 26ರಂದು ಮಧ್ಯಾಹ್ನ 2.45ಕ್ಕೆ ಸುರಪುರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ `ಜೀವನ ಪಾವನಕ್ಕೆ ಶರಣರ ವಚನ' ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಚ್.ಸಿ.ಪಾಟೀಲ ಉದ್ಘಾಟಿಸುವರು. ಡಾ. ಭೀಮರಾಯ ಅರಿಕೇರಿ ಉಪನ್ಯಾಸ ನೀಡುವರು. ಚಂದ್ರಶೇಖರ ಜಡಿಮರಳ, ಎ.ಕೃಷ್ಣ ಸುರಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶ್ರೀನಿವಾಸ ಜಾಲವಾದಿ ಅಧ್ಯಕ್ಷತೆ ವಹಿಸುವರು ಎಂದರು.ಡಿ. 29ರಂದು ಬೆಳಿಗ್ಗೆ 9.30ಕ್ಕೆ  ಶಹಾಪುರದ ಗುತ್ತಿಪೇಟೆಯ ಸಗರನಾಡು ವಿದ್ಯಾಸಂಸ್ಥೆಯಲ್ಲಿ, `ಜಾತೀಯತೆ ಮೀರಿದ್ದೇ ಶರಣ ಸಂಸ್ಕೃತಿ' ಉಪನ್ಯಾಸ ಕಾರ್ಯಕ್ರಮ ಜರುಗಲಿದ್ದು, ಬಸವರಾಜಪ್ಪಗೌಡ ದರ್ಶನಾಪುರ ಉದ್ಘಾಟಿಸಲಿದ್ದು, ಕೆ.ಗಿರಿಮಲ್ಲ ಉಪನ್ಯಾಸ ನೀಡುವರು. ರವೀಂದ್ರನಾಥ ಪತ್ತಾರ, ಬಿ.ಎಸ್.ದೇಸಾಯಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಚಂದ್ರಶೇಖರ ಆರಬೋಳ ಅಧ್ಯಕ್ಷತೆ ವಹಿಸುವರು.ಜ. 2ರಂದು ಯಾದಗಿರಿ ನ್ಯೂ ಕನ್ನಡ ಪದವಿಪೂರ್ವ ಕಾಲೇಜಿನಲ್ಲಿ `ಮನುವಾದ ಮೀರಿ ಮಾನವೀಯ ವಾದ ತೋರಿದ್ದೇ ಬಸವ ಬೆಳಕು' ಕಾರ್ಯಕ್ರಮ ನಡೆಯಲಿದ್ದು, ಚನ್ನಾರೆಡ್ಡಿ ಪಾಟೀಲ ತುನ್ನೂರ ಉದ್ಘಾಟಿಸುವರು. ಕಲ್ಯಾಣಕುಮಾರ ಸಗರ ಉಪನ್ಯಾಸ ನೀಡುವರು. ದೇವರಾಜ ನಾಯಕ, ಸಿದ್ದಪ್ಪ ಹೊಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರೊ.ರಘುನಾಥ ರೆಡ್ಡಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ಜ. 7ರಂದು ಗರುಮಠಕಲ್ ಖಾಸಾಮಠದಲ್ಲಿ `ಶರಣ ತತ್ವ ಸರ್ವಕಾಲಕ್ಕೂ ಮಹತ್ವ' ಕಾರ್ಯಕ್ರಮ ಜರುಗಲಿದೆ. ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿ ಸಾನ್ನಿಧ್ಯ ವಹಿಸಲಿದ್ದು, ಶಾರದಾ ಶಿವಕುಮಾರ ಕಡೇಚೂರ ಉದ್ಘಾಟಿಸುವರು. ರೇವಣಸಿದ್ದಪ್ಪ ನಾಗೋಜಿ ಉಪನ್ಯಾಸ ನೀಡುವರು.ಡಾ.ಭೀಮಾಶಂಕರ ಮುತ್ತಗಿ, ನಾಗರತ್ನ ಕುಪ್ಪಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ.ಮಾನು ಸಗರ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಶಿವರಾಜ ಟಿ.ಪಾಟೀಲ, ಸಿದ್ದಾರ್ಥ ಬಸರಿಗಿಡ, ಎಂ.ಬಿ.ನಿಂಗಪ್ಪ, ಕೆ.ಗಿರಿಮಲ್ಲ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry