26ರ ವರೆಗೆ ಎಎಪಿ ಸದಸ್ಯತ್ವ ಅಭಿಯಾನ

7

26ರ ವರೆಗೆ ಎಎಪಿ ಸದಸ್ಯತ್ವ ಅಭಿಯಾನ

Published:
Updated:

ಬೆಂಗಳೂರು: ಆಮ್‌ ಆದ್ಮಿ ಪಕ್ಷ (ಎಎಪಿ) ರಾಜ್ಯದಲ್ಲಿ ಆರಂಭಿಸಿರುವ ಸದಸ್ಯತ್ವ ಅಭಿಯಾನ ಜ. 26 ರವರೆಗೆ ನಡೆ­ಯಲಿದೆ’ ಎಂದು ಪಕ್ಷದ ಕಾರ್ಯ­ಕಾರಿಣಿ ಸದಸ್ಯ ಪೃಥ್ವಿ ರೆಡ್ಡಿ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­­ನಾಡಿದ ಅವರು, ‘ಈ ಅವಧಿ­ಯಲ್ಲಿ ಯಾರೇ ಬೇಕಾದರೂ ಆಮ್‌ ಆದ್ಮಿ ಪಕ್ಷದ ಸದಸ್ಯರಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದ­ಕ್ಕಾಗಿ ಯಾವುದೇ ಶುಲ್ಕವನ್ನು ನೀಡ­ಬೇಕಾಗಿಲ್ಲ’ ಎಂದರು.‘ಅರ್ಜಿಗಳನ್ನು ಸಲ್ಲಿಸಲು ದೂರ­ವಾಣಿ ಸಂಖ್ಯೆ 077982 20033 ಗೆ ‘ಮಿಸ್ ಕಾಲ್’ ನೀಡಿದರೇ ಸಾಕು ಅಥವಾ ಎಸ್‌ಎಂಎಸ್‌ ಮೂಲಕ ಹೆಸರು ಮತ್ತು ಅಂಚೆ ಸಂಖ್ಯೆಯ ಮಾಹಿತಿಯನ್ನು ನೀಡಬಹುದು’ ಎಂದು ಹೇಳಿದರು.

‘ಪಕ್ಷದ ಜಾಲತಾಣದಲ್ಲೂ ನೋಂದ­­ಣಿಗೆ ಅವಕಾಶವಿದ್ದು, aap­karagent@gmail.comಗೆ ಇಮೇಲ್‌ ಮುಖಾಂತರ ಸದಸ್ಯತ್ವವನ್ನು ಪಡೆಯ­ಬಹುದಾಗಿದೆ. ಜಿಲ್ಲಾ ಮಟ್ಟದ ಕಾರ್ಯ­ಕರ್ತರ ಬಗ್ಗೆ ಮಾಹಿತಿಯನ್ನು www.aap­karnataka.org ಆನ್‌­ಲೈನ್‌ನಲ್ಲಿ ಪಡೆಯಬಹುದು‘ಬೆಂಗ­ಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಾರವಾರ, ಬೆಳಗಾವಿ ಸೇರಿ ರಾಜ್ಯದ 12 ಲೋಕ­ಸಭಾ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸಲಿದೆ. ಮುಂದೆ ಸಂಘಟನೆ­­ನೋಡಿಕೊಂಡು ಇನ್ನಿ­ತರ ಕ್ಷೇತ್ರ­­ಗಳಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry