26/11: ಜೀವದಾನ ಬೇಡಿದ ಕಸಾಬ್

7

26/11: ಜೀವದಾನ ಬೇಡಿದ ಕಸಾಬ್

Published:
Updated:

ನವದೆಹಲಿ (ಪಿಟಿಐ):  `ಹುಸಿ ಸಿದ್ಧಾಂತತಲೆಯಲ್ಲಿ ತುಂಬಿಕೊಂಡು ನಾನು ಇಂಥ ಹೀನ ಕೃತ್ಯಕ್ಕೆ ಇಳಿಯಬೇಕಾಯಿತು. ನಾನಿನ್ನೂ ಯುವಕ. ಹಾಗಾಗಿ ಪ್ರಾಣ ತೆಗೆಯುವ ಬದಲು ಜೀವ ಕೊಡಿ~

-26/11ರ ಮುಂಬೈ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಉಗ್ರ ಅಜ್ಮಲ್ ಕಸಾಬ್, ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಜೀವದಾನ ಬೇಡಿದ್ದು ಹೀಗೆ.`ದಾಳಿ ಸಂಚಿನಲ್ಲಿ ಕಸಾಬ್ ಭಾಗಿಯಾಗಿರಲಿಲ್ಲ. ಹಾಗಾಗಿ ಆತನಿಗೆ ವಿಧಿಸಿರುವ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬೇಕು~ ಎಂದು ಕಸಾಬ್ ಪರ ವಕೀಲ ರಾಜು ರಾಮಚಂದ್ರನ್ ಅವರು, ನ್ಯಾಯಮೂರ್ತಿ ಅಫ್ತಾಬ್ ಆಲಂ ಅವರನ್ನೊಳಗೊಂಡ ಪೀಠವನ್ನು ಕೋರಿದರು.`ಕಸಾಬ್‌ಗೆ ವಿಧಿಸಿರುವ ಮರಣ ದಂಡನೆಯನ್ನು ಆತನ ವಯಸ್ಸು ಪರಿಗಣಿಸಿ ಜೀವಾವಧಿಗೆ ಇಳಿಸಬೇಕು. ಹುಸಿ ಸಿದ್ಧಾಂತ ತಲೆಯಲ್ಲಿ ತುಂಬಿಕೊಂಡ ಕಾರಣ ಕಸಾಬ್ ಈ ಕೃತ್ಯಕ್ಕೆ ಇಳಿದ. ಹಾಗಾಗಿ ಆತನನ್ನು ನೇಣಿಗೇರಿಸುವುದು ಸರಿಯಲ್ಲ~ ಎಂದು ವಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry